ಮೋದಿ ಉದ್ಘಾಟಿಸಿದ ಮಾದರಿ ತರಗತಿ ಸಂಪೂರ್ಣ ನಕಲಿ ಎಂದು ಟ್ರೋಲ್ ಮಾಡುತ್ತಿರುವ ನೆಟ್ಟಿಗರು

Prasthutha|

►ಪ್ರಧಾನಿ ಮೋದಿಯ ಫೋಟೋಶೂಟ್ ಗಾಗಿ ನಕಲಿ ಕ್ಲಾಸ್ ರೂಮ್ ಸೃಷ್ಟಿ?

- Advertisement -

ಗುಜರಾತ್: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಗಾಂಧೀ ನಗರದಲ್ಲಿ ಉದ್ಘಾಟಿಸಿದ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಎಂಬ ಮಾದರಿ ತರಗತಿ ಸಂಪೂರ್ಣವಾಗಿ ನಕಲಿ ಎಂದು ನೆಟ್ಟಿಗರು ಆರೋಪಿಸಿದ್ದು, ಮಾದರಿ ತರಗತಿ ಎನ್ನಲಾಗಿರುವ ಕೋಣೆಯ ಚಿತ್ರವನ್ನು ಹಂಚಿಕೊಂಡು ಮೋದಿ ಸ್ಟಂಟ್ ಗಾಗಿ ನಡೆಸಿದ ಕ್ಲಾಸ್ ರೂಮ್ ಫೋಟೋಶೂಟ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟ್ರೋಲ್ ಮಾಡಿದ್ದಾರೆ.

ಗುಜರಾತ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗಾಂಧಿನಗರದಲ್ಲಿ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿದ್ದು, ಈ ಸಮಯದಲ್ಲಿ, ಪ್ರಧಾನಿ ಮೋದಿ ವಿದ್ಯಾರ್ಥಿಗಳನ್ನು ಭೇಟಿಯಾಗಿ, ತರಗತಿಯಲ್ಲಿ ಕುಳಿತುಕೊಂಡು ಸಂವಾದ ಮಾಡುವ ಚಿತ್ರವನ್ನು ಹಂಚಿಕೊಂಡಿದ್ದರು. ಮತ್ತು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಇಂದು ಶಿಕ್ಷಣ ವ್ಯವಸ್ಥೆ ತುಂಬಾ ಸ್ಮಾರ್ಟ್ ಆಗಿದೆ ಮತ್ತು ಗುಜರಾತ್ ನ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ ಎಂದು ಹೇಳಿದ್ದರು.

- Advertisement -

ಆದರೆ ಪ್ರಧಾನಿಯ ಪ್ರಚಾರದ ಸ್ಟಂಟ್ ಮತ್ತು ಫೋಟೋಶೂಟ್ ಗಳಿಗಾಗಿ ನಕಲಿ ಸ್ಮಾರ್ಟ್ ಕ್ಲಾಸ್ರೂಮ್ ಅನ್ನು ಸ್ಥಾಪಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಮಾದರಿ ತರಗತಿ ಸಂಪೂರ್ಣವಾಗಿ ನಕಲಿ ಎಂಬ ಆರೋಪ ಕೇಳಿ ಬರುತ್ತಿದ್ದು, ಫ್ಲೆಕ್ಸ್ ಪ್ರಿಂಟಿಂಗ್ ಮೂಲಕ ನಕಲಿ ಕಿಟಕಿ, ಅದೇ ರೀತಿ ಬ್ಯಾನರ್ ಪೋಸ್ಟರ್ ಗಳನ್ನು ಹಾಕುವ ಮೂಲಕ ಫೋಟೋ ಸ್ಟುಡಿಯೋವನ್ನು ತರಾತುರಿಯಲ್ಲಿ ತರಗತಿಯಾಗಿ ಪರಿವರ್ತಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ, ತರಗತಿಯಲ್ಲಿ 6 ವಿದ್ಯಾರ್ಥಿಗಳೊಂದಿಗೆ ಕೇವಲ 3 ಬೆಂಚುಗಳಿವೆ. ಎಲ್ಲಾ ಗೋಡೆಗಳು ರಟ್ಟಿನಿಂದ ಮಾಡಲ್ಪಟ್ಟಿವೆ. ಆದ್ದರಿಂದ ಇದು ಯಾವುದೇ ಮಾದರಿ ತರಗತಿಯಲ್ಲ, ಮೋದಿ ಪ್ರಚಾರಕ್ಕಾಗಿ ಕ್ಲಾಸ್ ರೂಂ ನಂತೆ ಸೆಟ್ಟ್ ಹಾಕಲಾಗಿದೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ.

Join Whatsapp