►ರಿಷಿ ಭಾರತೀಯ ಪ್ರಜೆಯಲ್ಲ, ಮೂಲತ ಪಾಕಿಸ್ತಾನದವರು.
ನವದೆಹಲಿ: ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾಗುತ್ತಿದ್ದಂತೆ ಸಂಭ್ರಮಿಸುತ್ತಿರುವ ಬಲಪಂಥೀಯರು ಯಾಕೆ ಸೋನಿಯಾ ಗಾಂಧಿಯನ್ನು ಒಪ್ಪುತ್ತಿಲ್ಲ ಎಂದು ನೆಟ್ಟಿಗರು ತಗಾದೆಯೆತ್ತಿದ್ದಾರೆ.
ಈ ಬಗ್ಗೆ ಪ್ರಸ್ತಾಪಿಸಿದ ಸಾಮಾಜಿಕ ಹೋರಾಟಗಾರ ರಾ.ಚಿಂತನ್, ಸೋನಿಯಾ ಗಾಂಧಿ ಮೂಲತ ಭಾರತೀಯಳಲ್ಲ ಎಂದು ಹಿಯಾಳಿಸುವವರು, ರಿಷಿ ಸುನಾಕ್ ರನ್ನು ಭಾರತದ ಪ್ರಜೆ ಎಂದು ಕೊಂಡಾಡುತ್ತಿರುವುದು ತಮಾಷೆಯಾಗಿದೆ ಎಂದು ಹೇಳಿದ್ದಾರೆ.
ರಿಷಿ ಸುನಾಕ್ ಅವರು , ಮೂಲತಃ ಅಜ್ಜನ ಹುಟ್ಟೂರಾದ ಪಾಕಿಸ್ತಾನದ ಗುಜ್ರನ್’ವಾಲಾದವರು ಮತ್ತು ಅವರ ತಂದೆ ಕೀನ್ಯಾದಲ್ಲಿ ಜನಿಸಿದರು, ತಾಯಿ ತಾಂಜೇನಿಯಾದಲ್ಲಿ ಹುಟ್ಟಿದರು. ರಿಷಿ ಹುಟ್ಟಿದ್ದು ಯುಕೆಯ ಸೌತಂಪ್ಟನ್ ನಲ್ಲಿ . ಮದುವೆಯಾಗಿದ್ದು ಮಾತ್ರ ಭಾರತ ಮೂಲದ ಸುಧಾ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿಯವರನ್ನು. ಸುನಾಕ್ ಭಾರತದ ಪ್ರಜೆಯಲ್ಲ. ಈಗ ಅವರು ಕನ್ಸರ್ವೇಟಿವ್ ಪಕ್ಷದಿಂದ ಯುಕೆಯ ಪ್ರಧಾನಿಯಾಗಿ ನೇಮಕವಾಗಿದ್ದಾರೆ. ನಮ್ಮ ದೇಶದ ಅಳಿಯ ಪ್ರಧಾನಿಯಾಗಿದ್ದು ಬಹಳ ಸಂತೋಷದ ವಿಚಾರ. ಆದರೆ ಸೋನಿಯಾ ಗಾಂಧಿ ಇಟಲಿಯವರೆಂದು ಜರಿಯುತ್ತಿರುವ ಸಂಘಪರಿವಾರದವರು ರಿಷಿ ಪ್ರಧಾನಿಗಾದಿಗೆ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ ಎಂದು ಹೇಳಿದರು.
ರಿಷಿ ಭಾರತದ ಪ್ರಜೆಯಲ್ಲ, ಭಾರತದಲ್ಲಿ ಅವರ ಪೀಳಿಗೆಯ ಗುರುತಿಲ್ಲ. ನಮ್ಮ ನಾಡಿನ ಹೆಣ್ಣುಮಗಳನ್ನು ಮದುವೆಯಾಗಿ ವಿದೇಶದಲ್ಲೇ ನೆಲೆಸಿದ್ದಾರೆ. ಅದೇ ಸೋನಿಯಾ ಪ್ರೀತಿಸಿ ಮದುವೆಯಾಗಿ ಗಂಡನ ದೇಶಕ್ಕೆ ಬಂದರು, ಈ ದೇಶದ ಪ್ರಜೆಯಾದರು, ಅತ್ತೆ, ಗಂಡನನ್ನು ದುರಂತವಾಗಿ ಕಳೆದುಕೊಂಡರೂ ಈ ದೇಶ ಬಿಟ್ಟು ಕದಲಲಿಲ್ಲ, ಪ್ರಿಯಾಂಕಾ, ರಾಹುಲ್ ಎಂಬಿಬ್ಬರು ಮಕ್ಕಳನ್ನು ಹೆತ್ತು ಈ ನೆಲದಲ್ಲೇ ಅಮ್ಮ ಎನಿಸಿಕೊಂಡರು. ರಿಷಿಗೆ ಖುಷಿಯಾಗುವ ಮನಸುಗಳು ಒಂದು ಹೆಣ್ಣಿಗೆ ಎಷ್ಟೆಲ್ಲಾ ಅವಮಾನ ಮಾಡಿತಲ್ಲವೇ, ಮಾಡುತ್ತಿದೆಯಲ್ಲವೇ, ಎಂಥಾ ವಿಕಟ ಎಂದು ರಾ ಚಿಂತನ್ ಪ್ರಶ್ನಿಸಿದ್ದಾರೆ.
ಬ್ರಿಟನ್ನಿ ನಲ್ಲೇ ಹುಟ್ಟಿದ , ಭಾರತೀಯತೆಯ ಗಂಧಗಾಳಿಯೇ ಇಲ್ಲದ ರಿಷಿ ಸುನಾಕ್ ಭಾರತೀಯ ಸಂಸ್ಕೃತಿಯ ಹೆಮ್ಮೆಯ ರಾಯಭಾರಿ , ಭಾರತಕ್ಕೆ ಸೊಸೆಯಾಗಿ ಬಂದು ಇಲ್ಲಿಯ ನಾರೀಮಣಿಗಳಿಗಿಂತ ಶ್ರದ್ದೆಯಿಂದ ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಂಡ ಸೋನಿಯಾ ಗಾಂಧಿ ಮಾತ್ರ ಇಟಲಿಯ ಹೆಂಗಸು, ಇದ್ಯಾವ ನ್ಯಾಯ ಎಂದು ನೆಟ್ಟಿಗರು ತಗಾದೆಯೆತ್ತಿದ್ದಾರೆ.
ಸುನಕ್ ಪ್ರಧಾನಿಯಾಗುತ್ತಿದ್ದಂತೆ ಭಾರತದ ಹಲವು ಸನಾತನವಾದಿಗಳು ಸುನಾಕ್ ಕುರಿತಾಗಿ ಹಲವು ಅವಕಾಶವಾದಗಳನ್ನು ಮಂಡಿಸುತ್ತಿದ್ದಾರೆ. ಈ ಮಧ್ಯೆ ಸುನಕ್, ಗೋಮಾಂಸದ ಪರವಾಗಿರುವ ಟ್ವೀಟ್, ಫೋಟೋ ವೈರಲ್ ಆಗಿದ್ದು, ಇದೀಗ ಸೋನಿಯಾ ಗಾಂಧಿಯನ್ನು ಹಿಯಾಳಿಸುವವರು ಸುನಕ್ ಅನ್ನು ಸಂಭ್ರಮಿಸಲು ಯಾವುದೇ ಅಧಿಕಾರವಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.