ನೇಪಾಳ ಪ್ರಧಾನಿ ‘ಪ್ರಚಂಡ’ ವಿಶ್ವಾಸಮತ ಸಾಬೀತು

Prasthutha|

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್ ಪ್ರಚಂಡ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಅವರು ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ನಾಲ್ಕು ಬಾರಿ ವಿಶ್ವಾಸಮತ ಪರೀಕ್ಷೆ ಎದುರಿಸಿದಂತಾಗಿದೆ.

- Advertisement -

ಕಮ್ಯುನಿಸ್ಟ್‌ ಪಾರ್ಟಿ ಆಫ್‌ ನೇಪಾಳದ ನಾಯಕ ಪ್ರಚಂಡ ನೇತೃತ್ವದ ಸರ್ಕಾರದ ಪರವಾಗಿ ಸಂಸತ್ತಿನ 275 ಮಂದಿ ಸದಸ್ಯರ ಪೈಕಿ 157 ಮಂದಿ ಮತ ಚಲಾಯಿಸಿದ್ದಾರೆ.

ಜನತಾ ಸಮಾಜವಾದಿ ಪಕ್ಷವು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಕಾರಣ ಪ್ರಚಂಡ ಅವರಿಗೆ ವಿಶ್ವಾಸಮತ ಸಾಬೀತು ಮಾಡುವ ಸವಾಲು ಎದುರಾಗಿತ್ತು. ಪ್ರಚಂಡ ಅವರ ಸರ್ಕಾರಕ್ಕೆ ಕನಿಷ್ಠ 138 ಸದಸ್ಯರ ಬೆಂಬಲ ಅಗತ್ಯವಿತ್ತು.

- Advertisement -

ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್‌ ಮತದಾನವನ್ನು ಬಹಿಷ್ಕರಿಸಿ, ಉಪಪ್ರಧಾನಿ ಮತ್ತು ಗೃಹ ಸಚಿವ ರವಿ ಲಾಮಿಚ್ಛಾನೆ ವಿರುದ್ಧ ಘೋಷಣೆ ಕೂಗಿತು. ಇದರಿಂದ ಕಲಾಪವು ವಿಳಂಬವಾಯಿತು. ಸ್ಪೀಕರ್‌ ದೇವ್‌ ರಾಜ್‌ ಘಿಮಿರೆ, ಪ್ರಚಂಡ ಅವರು ವಿಶ್ವಾಸ ಮತ ಗೆದ್ದಿರುವುದಾಗಿ ಘೋಷಿಸಿದರು.



Join Whatsapp