ಹಾನಿಕಾರಕ ರಾಸಾಯನಿಕ ಪತ್ತೆ: ನೇಪಾಳದಲ್ಲಿ ಎವರೆಸ್ಟ್, ಎಂಡಿಎಚ್ ಮಸಾಲೆಗಳ ಮಾರಾಟ ನಿಷೇಧ

Prasthutha|

ಕಠ್ಮಂಡು: ಎವರೆಸ್ಟ್ ಹಾಗೂ ಎಂಡಿಎಚ್ ಮಸಾಲೆ ಪದಾರ್ಥಗಳ ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿರುವುದರಿಂದ ನೇಪಾಳ ದೇಶವು ಅವುಗಳ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ.

- Advertisement -


ಈ ಎರಡು ಭಾರತದ ಬ್ರ್ಯಾಂಡ್ ಗಳ ಮಸಾಲೆ ಪದಾರ್ಥಗಳ ಮೇಲೆ ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಕ್ಯಾನ್ಸರ್ ಕಾರಕ ಕ್ರಿಮಿನಾಶಕವಾದ ಎಥಿಲೀನ್ ಆಕ್ಸೈಡ್ ಪತ್ತೆ ಪರೀಕ್ಷೆಯನ್ನು ನಡೆಸಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ನೇಪಾಳ ಆಹಾರ ತಂತ್ರಜ್ಞಾನ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹಾಜನ್, “ಎವರೆಸ್ಟ್ ಹಾಗೂ ಎಂಡಿಎಚ್ ಮಸಾಲೆ ಪದಾರ್ಥಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ. ನಾವು ಮಾರುಕಟ್ಟೆಯಲ್ಲಿ ಅವುಗಳ ಮಾರಾಟವನ್ನೂ ನಿಷೇಧಿಸಿದ್ದೇವೆ. ಮಸಾಲೆ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿವೆ ಎಂಬ ವರದಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.



Join Whatsapp