ನೇಪಾಳ ವಿಮಾನ‌ ದುರಂತ: ಮೃತರಲ್ಲಿ ಐವರು ಭಾರತೀಯರು

Prasthutha|

- Advertisement -

ಮೃತರ ಸಂಖ್ಯೆ 67ಕ್ಕೆ ಏರಿಕೆ…

ನೇಪಾಳ: ನೇಪಾಳದ ಪೋಖರಾದಲ್ಲಿ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ಮೃತರ ಸಂಖ್ಯೆ 67 ಕ್ಕೆ ಏರಿಕೆಯಾಗಿದೆ.

- Advertisement -

ಏರ್‌ ಲೈನ್ಸ್ ವಿಮಾನದಲ್ಲಿ ಐವರು ಭಾರತೀಯರು ಇದ್ದರು ಎಂದು ರಾಷ್ಟ್ರದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವೀಟ್‌ ನಲ್ಲಿ ಖಚಿತಪಡಿಸಿದೆ.

ಯೇತಿ ಏರ್‌ ಲೈನ್ಸ್‌ 9N-ANC ATR-72 ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಪೋಖರಾದಲ್ಲಿ ಲ್ಯಾಂಡಿಂಗ್‌ ವೇಳೆ ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಸೇತಿ ನದಿ ದಂಡೆ ಮೇಲೆ ವಿಮಾನ ಪತನಗೊಂಡಿದೆ.

Join Whatsapp