NDAನೂ ಇಲ್ಲ, INDIAನೂ ಇಲ್ಲ, ಸ್ವತಂತ್ರವಾಗಿ ಹೋರಾಡಿ ಪ್ರಾದೇಶಿಕ ಪಕ್ಷ ಉಳಿಸುತ್ತೇವೆ: ಹೆಚ್.ಡಿ. ದೇವೇಗೌಡ

Prasthutha|

ಬೆಂಗಳೂರು: ಯಾವ ಮೈತ್ರಿಕೂಟದ ಜೊತೆ ಸೇರುವ ಪ್ರಶ್ನೆಯೇ ಇಲ್ಲ, ಕುಮಾರಸ್ವಾಮಿಯವರು ಮೊನ್ನೆ ವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿರೋಧಿಸಿ ಟ್ವೀಟ್ ಮಾಡಿದ್ದರು. ಅದನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಸದನದಲ್ಲಿ ಹೋರಾಟ ಮಾಡಿದರು. ಸದನದಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದೆ, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ, ಬಿಜೆಪಿಯವರು ಕಲಾಪ ಬಹಿಷ್ಕರಿಸಿ ವಾಕ್ ಔಟ್ ಮಾಡಿದರು. ಆಗ ಕುಮಾರಸ್ವಾಮಿಯವರೂ ಅವರನ್ನು ಅನುಸರಿಸಿದರು. ಅದಕ್ಕೆ ಜೆಡಿಎಸ್-ಬಿಜೆಪಿ ಒಟ್ಟಾಗಿದೆ ಎಂದು ಕಥೆ ಹೆಣೆಯುವುದು, ಸಂಬಂಧ ಕಲ್ಪಿಸುವುದು ಬೇಡ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

- Advertisement -

ಜೆಡಿಎಸ್ ಪ್ರಾದೇಶಿಕ ಪಕ್ಷ. ವಿಧಾನ ಮಂಡಲ ಕಲಾಪ ಮುಗಿಯುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ 19 ವಿಧಾನಸಭೆ ಸದಸ್ಯರು ಮತ್ತು 7 ಮಂದಿ ವಿಧಾನ ಪರಿಷತ್ ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ.ಪ್ರಾದೇಶಿಕ ಪಕ್ಷವನ್ನು ಹೇಗೆ ಉಳಿಸಬೇಕೆಂದು ಸುದೀರ್ಘವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ನಾನು ಇವತ್ತು ಅವರನ್ನು ಭೇಟಿಯಾಗಿ ಮುಂದೆ ಯಾವ ಮಾರ್ಗದಲ್ಲಿ ಮುಂದೆ ಹೋಗಬೇಕು ಎಂಬುದನ್ನು ಶಾಸಕರ ಜೊತೆ ಹಂಚಿಕೊಂಡಿದ್ದೇನೆ ಎಂದರು.


ನಾವು ಕುಡಿಯೋದೇ ಬೇಡ ಅಂತೀವಿ, ನೀವು ಸ್ಪಲ್ಪ ಕುಡೀರಿ ಅನ್ನುತ್ತಿದ್ದೀರಿ ಪರ್ವಾಗಿಲ್ಲ ರಾಷ್ಟ್ರದ ರಾಜಕಾರಣದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಈ ಪಕ್ಷ ಉಳಿಸುವುದು ರಾಜ್ಯದ ಜನರ ಹಿತದೃಷ್ಟಿಯಿಂದ ಅಗತ್ಯ, ನಮ್ಮ ಪಕ್ಷಕ್ಕಾಗಿರೋ ಅನ್ಯಾಯ ಅದೆಲ್ಲವನ್ನು ಜನರೆ ಮುಂದೆ ಇಟ್ಟು, ಕರ್ನಾಟಕದಲ್ಲಿ ಸಾಮರ್ಥ್ಯ ಇದೆ ಅನ್ನೋದನ್ನು ಸಾಬೀತು ಮಾಡುತ್ತೇವೆ, ರಾಜಕೀಯ ಲಾಭ ಮತ್ತು ತೋರಿಕೆಗಾಗಿ ಹೇಳುತ್ತಿಲ್ಲ. ಜೀವನದ್ದುಕ್ಕೂ ಹೋರಾಟ ಮಾಡುತ್ತೇವೆ ಎಂದರು.



Join Whatsapp