ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಹೇಳಲಾದ ಅಮನ್ ಸಿಂಗ್‌ನನ್ನು ಸಿಬಿಐ ಜಾರ್ಖಂಡ್‌ನ ಧನ್ಬಾದ್‌ನಿಂದ ಬಂಧಿಸಿದೆ. ಈ ಸಂಬಂಧವಾಗಿ ಸಿಬಿಐ ನಡೆಸುತ್ತಿರುವ ಏಳನೇ ಬಂಧನ ಇದಾಗಿದೆ.
ರವಿವಾರ ಗುಜರಾತ್‌ನ ಗೋಧ್ರಾ ಜಿಲ್ಲೆಯ ಖಾಸಗಿ ಶಾಲೆಯ ಮಾಲೀಕನನ್ನು ಸಿಬಿಐ ಬಂಧಿಸಿತ್ತು. ಪಂಚಮಹಲ್ ಜಿಲ್ಲೆಯ ಗೋಧ್ರಾ ಬಳಿಯ ಜಯ್ ಜಲರಾಮ್ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್‌ನನ್ನು ಪರೀಕ್ಷೆಯ ಅಂಕಗಳನ್ನು ಹೆಚ್ಚಿಸುವುದಾಗಿ ಭರವಸೆ ನೀಡಿ ಅಭ್ಯರ್ಥಿಗಳಿಂದ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧಿಸಲಾಗಿತ್ತು.