ನೀಟ್ : ಆರು ಅಂಕ ಲಭಿಸಿದ ವಿಧ್ಯಾರ್ಥಿನಿ ಆತ್ಮಹತ್ಯೆ ; ಮರು ಮೌಲ್ಯಮಾಪನದಲ್ಲಿ 590 ಅಂಕಗಳು.!

Prasthutha|

ಭೋಪಾಲ್ : ವೈದ್ಯಕೀಯ ಕಾಲೇಜುಗಳ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಪಲಿತಾಂಶದಲ್ಲಿನ ದೋಷವು ವಿದ್ಯಾರ್ಥಿಯ ಜೀವವನ್ನು ಬಲಿಪಡೆದಿದೆ. ಮೊದಲ ಫಲಿತಾಂಶದಲ್ಲಿ ಆರು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ನಂತರ ಮರು ಮೌಲ್ಯಮಾಪನದಲ್ಲಿ 590 ಅಂಕಗಳು ದೊರೆತಿವೆ. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ವಿಧ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ವೆಬ್ ಸೈಟಿನಲ್ಲಿ ನೀಟ್ ಪರೀಕ್ಷೆಯ ಪಲಿತಾಂಶವನ್ನು ಪರಿಶೀಲಿಸಿದಾಗ ವಿಧ್ಯಾರ್ಥಿನಿಯು ಒಟ್ಟು 720 ಅಂಕಗಳಲ್ಲಿ ಕೇವಲ ಆರು ಅಂಕಗಳನ್ನು ಪಡೆದಿದ್ದಾಳೆ. ಇದರಿಂದ ನಿರಾಶೆಗೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಚೆನ್ನಾಗಿ ಓದುವ ಮಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿಲ್ಲ ಎಂದು ಆಘಾತಕ್ಕೊಳಗಾದ ಪೋಷಕರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಯ ಪಲಿತಾಂಶಗಳ ಮರು ಮೌಲ್ಯಮಾಪನದ ಪಲಿತಾಂಶಗಳು ಹೊರಬಂದಾಗ ಅಧ್ಯಯನದಲ್ಲಿ ಉತ್ತಮ ಆಸಕ್ತಿ ಹೊಂದಿದ್ದ ಬಾಲಕಿ ಒಟ್ಟು 720ರಲ್ಲಿ 590 ಅಂಕಗಳನ್ನು ಪಡೆದಿದ್ದಾಳೆ.

ವಿದ್ಯಾರ್ಥಿನಿಯ ಒಎಂಆರ್ ಶೀಟ್ (ಉತ್ತರಪತ್ರಿಕೆ) ಮತ್ತೊಮ್ಮೆ ಮರು ಮೌಲ್ಯಮಾಪನ ಮಾಡಿದಾಗ ಅವಳು 590 ಅಂಕಗಳನ್ನು ಗಳಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸುಮರ್ ಸಿಂಗ್ ಹೇಳಿದ್ದಾರೆ.

Join Whatsapp