ನವದೆಹಲಿ: 2021 – 22 ನೇ ಸಾಲಿನ NEET ಪಿಜಿ ಪ್ರವೇಶಕ್ಕಾಗಿ ಜನವರಿ 12 ರಿಂದ ಕೌನ್ಸಿಲಿಂಗ್ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ತಿಳಿಸಿದ್ದಾರೆ.
ಸುಪ್ರೀಮ್ ಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯವು, ವೈದ್ಯರಿಗೆ ನೀಡಿದ ಭರವಸೆಯಂತೆ ಜನವರಿ 12, 2022 ರಿಂದ MCC ( ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ) NEET-PG ಕೌನ್ಸಿಲಿಂಗ್ ಪ್ರಾರಂಭಿಸುತ್ತದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
2021 – 22 ನೇ ಸಾಲಿಗೆ NEET – PG ಪ್ರವೇಶಕ್ಕಾಗಿ ಕೌನ್ಸಿಲಿಂಗ್ ಪ್ರಾರಂಭಿಸಲು ಸುಪ್ರೀಮ್ ಕೋರ್ಟ್ ಶುಕ್ರವಾರ ಅನುಮತಿ ನೀಡಿತ್ತು. ಇತರ ಹಿಂದುಳಿದ ವರ್ಗ (OBC) ಅಭ್ಯರ್ಥಿಗಳಿಗೆ ಶೇಕಡಾ 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 10 ರಷ್ಟು ಮೀಸಲಾತಿಯ ಸಿಂಧುತ್ವವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.