ಕಾಮನ್‌ವೆಲ್ತ್ ಗೇಮ್ಸ್ ಕೂಟದಿಂದ ಹಿಂದೆ ಸರಿದ ನೀರಜ್ ಚೋಪ್ರಾ

Prasthutha|

ನವದೆಹಲಿ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದದಿಂದ ಹೊರಗುಳಿಯಲಿದ್ದಾರೆ.

- Advertisement -

ಗುರುವಾರದಿಂದ ಬರ್ಮಿಂಗ್’ ಹ್ಯಾಮ್ ‘ನಲ್ಲಿ ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ಚೋಪ್ರಾರ ಅನುಪಸ್ಥಿತಿಯಿಂದಾಗಿ ಭಾರತೀಯ ತಂಡ ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ.

ಇತ್ತೀಚೆಗಷ್ಟೇ ಅಮೆರಿಕದ ಒರೆಗಾನ್ ನಲ್ಲಿ ಮುಕ್ತಾಯವಾದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಚೋಪ್ರಾ ಬೆಳ್ಳಿ ಒದಕ ಗೆದ್ದು ಸಂಭ್ರಮಿಸಿದ್ದರು. ಇದು ಕೂಟದಲ್ಲಿ ಭಾರತ ತಂಡಕ್ಕೆ ಲಭಿಸಿದ ಏಕೈಕ ಪದಕವಾಗಿದೆ.

- Advertisement -

ವಿಶ್ವ ಚಾಂಪಿಯನ್ ಷಿಪ್ ಕೂಟದ ವೇಳೆ ಚೋಪ್ರಾರ ಕಾಲಿಗೆ ಗಾಯವಾಗಿತ್ತು. ಗಾಯದ ನಡುವೆಯೂ ಸ್ಪರ್ಧೆ ಮುಂದುವರಿಸಿದ್ದ ಒಲಿಂಪಿಕ್ಸ್ ಪದಕ ವಿಜೇತ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ಇದೀಗ ಗಾಯದ ಸಮಸ್ಯೆ ಹೆಚ್ಚಾದ ಕಾರಣ ಕಾಮನ್‌ವೆಲ್ತ್ ಕೂಟದಿಂದ ಹಿಂದೆ ಸರಿಯಲು ನೀರಜ್ ನಿರ್ಧರಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಅಲ್ಲದೆ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಬರ್ಮಿಂಗ್ ಹ್ಯಾಮ್ ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು.

ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಬಳಿಕ ಈ ಬಗ್ಗೆ ಮಾತನಾಡಿದ್ದ ನೀರಜ್ ಚೋಪ್ರಾ, ಕಾಮನ್ ವೆಲ್ತ್ ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಗಾಯದ ಕಾರಣ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.

ಇದರೊಂದಿಗೆ ಜಾವೆಲಿನ್ ಎಸೆತದಲ್ಲಿ ಭಾರತದ ಚಿನ್ನದ ಕನಸು ಕೂಡ ಬಹುತೇಕ ಕಮರಿದೆ. ಆಗಸ್ಟ್ 7 ರಂದು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಜಾವೆಲಿನ್ ಸ್ಪರ್ಧೆ ನಡೆಯಲಿದೆ. ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.



Join Whatsapp