ಹಂಗೇರಿ: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 88.77 ಮೀ. ದೂರ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿದ್ದಾರೆ.
ಜತೆಗೆ ಪ್ಯಾರಿಸ್ ಒಲಿಂಪಿಕ್ಸ್ ಗೂ ಅರ್ಹತೆ ಪಡೆದಿದ್ದಾರೆ.
ಒಲಿಂಪಿಕ್ಸ್ ಚಾಂಪಿಯನ್ ನೀರಜ್ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವತ್ತ ಚಿತ್ತಹರಿಸಿದ್ದಾರೆ. ಫೈನಲ್ ಸ್ಪರ್ಧೆಯು ರವಿವಾರ ನಡೆಯಲಿದೆ.
ಶುಕ್ರವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗುಂಪು A ಕ್ವಾಲಿಫೈಯರ್ ನಲ್ಲಿ ಕಣಕ್ಕಿಳಿದ ನೀರಜ್ ಈ ವರ್ಷದ ಉತ್ತಮ 88.77 ಮೀ. ದೂರ ಜಾವೆಲಿನ್ ಎಸೆದು ಫೈನಲ್ ಗೆ ಲಗ್ಗೆಯಿಟ್ಟರು. ಫೈನಲ್ ಪ್ರವೇಶಿಸಲು 83.00 ಮೀ. ಅರ್ಹತಾ ಅಂಕ ಮಾನದಂಡವಾಗಿತ್ತು. ಆದರೆ ಇದಕ್ಕಿಂತಲೂ ಹೆಚ್ಚಿನ ದೂರ ಎಸೆದ ನೀರಜ್ ನೇರವಾಗಿ ಫೈನಲ್ ಟಿಕೆಟ್ ಪಡೆದರು.
Neeraj chopra does it in one throw!@Neeraj_chopra1 qualifies for the Javelin throw finals with a throw of 88.67m#wabudapest23 #IndianAthletics pic.twitter.com/Uxnnw6EAPp
— Nithish Raghunandanan (@nithishr) August 25, 2023