ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ ನೀರಜ್ ಚೋಪ್ರಾ

Prasthutha|

ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಫೌಲ್ ನೊಂದಿಗೆ ಆಟ  ಪ್ರಾರಂಭಿಸಿದ ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ಎಸೆಯುವ ಮೂಲಕ ಅಗ್ರ ಸ್ಥಾನಕ್ಕೆ ಜಿಗಿದಿದ್ದಾರೆ.

- Advertisement -

ಚೋಪ್ರಾ ಅವರ ವೃತ್ತಿಜೀವನದ ನಾಲ್ಕನೇ ಅತ್ಯುತ್ತಮ ಎಸೆತ ಇದಾಗಿದ್ದು, ಅವರು ತಮ್ಮ ಮುಂದಿನ ನಾಲ್ಕು ಎಸೆತಗಳಲ್ಲಿ 88.00 ಮೀ, 86.11 ಮೀ, 87.00 ಮೀ ಮತ್ತು 83.60 ಮೀ. ಕ್ರಮವಾಗಿ ಎಸೆದರು.

ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 86.94 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು ಮತ್ತು ಜರ್ಮನಿಯ ಜೂಲಿಯನ್ ವೆಬರ್ 83.73 ಮೀ. ಎಸೆಯದ ಮೂಲಕ ಮೂರನೇ ಸ್ಥಾನ ಪಡೆದರು.

- Advertisement -

24 ವರ್ಷದ ಭಾರತೀಯ ಸೂಪರ್ಸ್ಟಾರ್ ಈಗ ಒಲಿಂಪಿಕ್ ಚಾಂಪಿಯನ್, ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಮತ್ತು ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದಾರೆ. ಇವೆಲ್ಲವನ್ನೂ ಅವರು ಕೇವಲ 13 ತಿಂಗಳಲ್ಲಿ ಸಾಧಿಸಿದ್ದು,  ಕಳೆದ ವರ್ಷ ಆಗಸ್ಟ್ 7 ರಂದು ಟೋಕಿಯೋದಲ್ಲಿ ಅವರು ಒಲಿಂಪಿಕ್ ಚಿನ್ನ ಗೆದ್ದಿದ್ದರು.

Join Whatsapp