ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಭಾವೀ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚುನಾಯಿತರಾದ ಬಳಿಕ, ಅಲ್ಲಿನ ಆಡಳಿತದ ಆಯಕಟ್ಟಿನ ಜಾಗಗಳಲ್ಲಿ ಭಾರತೀಯ ಮೂಲದವರ ಸಂಖ್ಯೆ ಹೆಚ್ಚುತ್ತಿದೆ. ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ತಂಡದಲ್ಲಿ ಭಾತರ ಮೂಲದ ನೀರಾ ಟಂಡನ್
ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾವೀ ಜೋ ಬೈಡನ್ ಸರಕಾರದ ಬಜೆಟ್ ಮತ್ತು ನಿರ್ವಹಣಾ ಕಚೇರಿಯ ನಿರ್ದೇಶಕರನ್ನಾಗಿ ನೀರಾ ಟಂಡನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಆಡಳಿತಾತ್ಮಕ ಬಜೆಟ್ ನಿರ್ವಹಣೆಯ ಹೊಣೆ ಹೊತ್ತಿರುವ ಈ ಹುದ್ದೆಯು ಅಮೆರಿಕದ ಶ್ವೇತಭವನದಲ್ಲಿ ಪ್ರಭಾವಿ ಸ್ಥಾನವಾಗಿದೆ.
ಪಸ್ತುತ ಟಂಡನ್ ಅವರು ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೇಸ್ ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಈ ಸಂಸ್ಥೆ ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯಾಗಿದ್ದು, ಆರ್ಥಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಉದಾರವಾದಿ ದೃಷ್ಟಿಕೋನ ಹೊಂದಿದೆ.