ಮಹಿಳೆಯರ ವಿರುದ್ಧ ದೌರ್ಜನ್ಯ| ಉತ್ತರಪ್ರದೇಶದಲ್ಲೇ ಅತ್ಯಧಿಕ ದೂರು

Prasthutha|

ಹೊಸದಿಲ್ಲಿ: ಮಹಿಳೆಯರ ವಿರುದ್ಧ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ 2022ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವ ಉತ್ತರಪ್ರದೇಶದಲ್ಲೇ ಅತ್ಯಧಿಕ ದೂರು ದಾಖಲಾಗಿರುವುದಾಗಿ ವರದಿಯಾಗಿದೆ.

- Advertisement -

2022ರಲ್ಲಿ ದೇಶದಲ್ಲಿ ಒಟ್ಟಾರೆ ದಾಖಲಾಗಿರುವ 31 ಸಾವಿರ ದೂರುಗಳ ಪೈಕಿ ಉತ್ತರ ಪ್ರದೇಶ ಒಂದರಲ್ಲೇ ಶೇ 54.3ರಷ್ಟು (16,872) ದೂರುಗಳು ದಾಖಲಾಗಿದ್ದು, ದೇಶದಲ್ಲೇ ಅಧಿಕವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (NCW) ಹೇಳಿದೆ.

ನಂತರದ ಸ್ಥಾನದಲ್ಲಿ ದೆಹಲಿ (3,004), ಮಹಾರಾಷ್ಟ್ರ (1,381), ಬಿಹಾರ (1,368) ಹಾಗೂ ಹರಿಯಾಣ (1,362) ರಾಜ್ಯಗಳು ಇವೆ.

- Advertisement -

9,710 ದೂರುಗಳು ಮಾನಸಿಕ ಕಿರುಕುಳಕ್ಕೆ ಸಂಬಂಧಿಸಿವೆ. 6,970 ದೂರುಗಳು ಕೌಟುಂಬಿಕ ಕಿರುಕುಳಕ್ಕೆ ಸಂಬಂಧಿಸಿವೆ. ಇನ್ನು 4,600 ದೂರುಗಳು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿವೆ ಎಂದು NCW ತಿಳಿಸಿದೆ.



Join Whatsapp