ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಅಡ್ಡಿಪಡಿಸಲು ಮುಖ್ಯಸ್ಥರ ಸಲಹೆ: ಎನ್ ಡಿಟಿವಿ ಮುಂಬೈ ಬ್ಯುರೋ ಮುಖ್ಯಸ್ಥ ರಾಜೀನಾಮೆ

Prasthutha|

ಮುಂಬೈ: ಅದಾನಿ ಸಂಸ್ಥೆಗಳ ಅವ್ಯವಹಾರಗಳ ಕುರಿತು ರಾಹುಲ್ ಗಾಂಧಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಗದ್ದಲ ಸೃಷ್ಟಿಸುವಂತೆ ಮತ್ತು ವಿಷಯವನ್ನು ಬದಲಾಯಿಸಲು ಮಧ್ಯಪ್ರವೇಶಿಸುವಂತೆ ಸೋಹಿತ್ ಅವರನ್ನು ಎನ್ ಡಿಟಿವಿ ವಾಹಿನಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ ಕೇಳಿದರು. ಇದನ್ನು ಪ್ರತಿಭಟಿಸಿ ಎನ್ ಡಿಟಿವಿ ಮುಂಬೈ ಬ್ಯೂರೋ ಮುಖ್ಯಸ್ಥ ಸೋಹಿತ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ.

- Advertisement -


ವಿದೇಶಿ ಶೆಲ್ ಕಂಪನಿ ವಿಷಯದಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಂಘ ಪರಿವಾರವೇ ಮುಂದೆ ಬಂದಿತ್ತು. ಎನ್ಡಿಟಿವಿ ಇದನ್ನು ಅನುಸರಿಸಿ ಅದಾನಿ ಪರವಾಗಿ ಸುದ್ದಿಯನ್ನು ಹರಡಿತು. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿವಾದಾತ್ಮಕ ಹಿಂಡೆನ್ಬರ್ಗ್ ವರದಿಯು 2013 ಮತ್ತು 2017 ರ ನಡುವೆ ನಾಲ್ಕು ಅದಾನಿ ಕಂಪನಿಗಳ ಷೇರು ತಿರುಚುವಿಕೆಯನ್ನು ಸೂಚಿಸುವ ಆರೋಪವನ್ನು ದೃಢಪಡಿಸಿದೆ. ಇದಾದ ಬಳಿಕ ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿತ್ತು.


ಏತನ್ಮಧ್ಯೆ, ರಾಹುಲ್ ಗಾಂಧಿ ತಮ್ಮ ನಿಲುವನ್ನು ಪ್ರಕಟಿಸಲು ಪತ್ರಿಕಾಗೋಷ್ಠಿ ಕರೆದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, ಇಂಡಿಯಾ ನಾಯಕರ ನಿರ್ಧಾರದ ಪ್ರಕಾರ ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಂಸತ್ತಿನ ಜಂಟಿ ಸಮಿತಿಯ ಬೇಡಿಕೆಯನ್ನು ಘೋಷಿಸುವುದಾಗಿತ್ತು. ಸೋಹಿತ್ ಮಿಶ್ರಾ ಸೇರಿದಂತೆ ಎಲ್ಲಾ ಪತ್ರಕರ್ತರು ಸಭಾಂಗಣವನ್ನು ತಲುಪಿದ್ದರು. ಅದಕ್ಕೂ ಮೊದಲು, ಸಂಜಯ್ ಪುಗಾಲಿಯಾ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸುವಂತೆ ಸೋಹಿತ್ ಅವರನ್ನು ಕೇಳಿದರು. ಅದಾನಿ ಅವರ ಎಎಂಜಿ ಮೀಡಿಯಾ ನೆಟ್ವರ್ಕ್ ಅನ್ನು ಎನ್ಡಿಟಿವಿ ಸ್ವಾಧೀನಪಡಿಸಿಕೊಂಡ ನಂತರ ಸಂಜಯ್ ಪುಗಾಲಿಯಾ ಅಧಿಕಾರ ವಹಿಸಿಕೊಂಡರು.

Join Whatsapp