NDTV ಗೆ ಏಷ್ಯಾದ ಅತ್ಯುತ್ತಮ ಮಾಧ್ಯಮ ಪ್ರಶಸ್ತಿ

Prasthutha|

ನವದೆಹಲಿ: ಏಷ್ಯಾದ ಅತ್ಯಂತ ಪ್ರತಿಷ್ಠಿತ ಕಾರ್ಪೊರೇಟ್ ಪ್ರಶಸ್ತಿಗಳಲ್ಲಿ ಒಂದಾದ “ಏಷ್ಯಾದ ಅತ್ಯುತ್ತಮ ಮಾಧ್ಯಮ ಕಂಪನಿ” ಪ್ರಶಸ್ತಿಯನ್ನು ಎನ್’ಡಿಟಿವಿ ತನ್ನದಾಗಿಸಿಕೊಂಡಿದೆ.

- Advertisement -

ಮಾಧ್ಯಮ ನಾಯಕತ್ವ, ವ್ಯವಹಾರ ನೈತಿಕತೆ ಮತ್ತು ಮಾರುಕಟ್ಟೆ ಪಾಲು ಅಥವಾ ಪ್ರಭಾವಕ್ಕಾಗಿ ಎನ್’ಡಿಟಿವಿಗೆ ಈ ಪ್ರಶಸ್ತಿ ಸಂದಿದ್ದು, ಅಮೆರಿಕದ ಬರ್ಕ್ಶೈರ್ ಮೀಡಿಯಾ (ಬ್ರಾಂಡ್ ಮತ್ತು ಮಾರಾಟ ಸಂಶೋಧನೆಯ ತಜ್ಞ ಸಂಸ್ಥೆ) ಈ ಪ್ರಶಸ್ತಿಯನ್ನು ನೀಡಲಿದೆ.

ಲಕ್ಷಾಂತರ ವೀಕ್ಷಕರು ಮತ್ತು ಆನ್ಲೈನ್ ಬಳಕೆದಾರರಿಗೆ ಕೃತಜ್ಞತೆ ಸಲ್ಲಿಸಿರುವ ಕಂಪೆನಿ, ಸುದ್ದಿವಾಹಿನಿಯಾಗಿ ನಿಮ್ಮ ವಿಶ್ವಾಸಕ್ಕಿಂತ ದೊಡ್ಡದು ಯಾವುದೂ ಅಲ್ಲ ಎಂದು ಹೇಳಿದೆ. ಎನ್’ಡಿಟಿವಿ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು, ಅತ್ಯುತ್ತಮ ಅಂತಾರಾಷ್ಟ್ರೀಯ ಮಾಧ್ಯಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಕಂಪೆನಿ ತಿಳಿಸಿದೆ.

Join Whatsapp