ಹೊಸದಿಲ್ಲಿ: ರಮಝಾನ್ ಮಾಸದಲ್ಲಿ ಉಪವಾಸ ವ್ರತ ಆಚರಿಸುತ್ತಿರುವ ತನ್ನ ಎಲ್ಲಾ ಮುಸ್ಲಿಂ ಉದ್ಯೋಗಿಗಳಿಗೆ ಬೇಗ ಕಚೇರಿಯಿಂದ ಹೊರಡಲು ಅವಕಾಶ ನೀಡಿದ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ ಡಿಎಂಸಿ) ಬುಧವಾರ ತನ್ನ ಆದೇಶವನ್ನು ಹಿಂಪಡೆದಿದೆ.
ಮಂಗಳವಾರ ಹೊರಡಿಸಿದ ಆದೇಶವನ್ನು ಎನ್ ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಅವರು ವಿರೋಧಿಸಿದ್ದು, ಅಂತಹ ಯಾವುದೇ ನಿರ್ದೇಶನ ಜಾತ್ಯತೀತವಲ್ಲ ಎಂದು ಹೇಳಿದರು.
“ನನಗೆ ಅಂತಹ ಯಾವುದೇ ಆದೇಶದ ಬಗ್ಗೆ ತಿಳಿದಿರಲಿಲ್ಲ ಮತ್ತು ನನ್ನ ತಿಳುವಳಿಕೆಗೆ ಬಂದಂತೆ ನಾನು ಅಂತಹ ಆದೇಶವನ್ನು ವಿರೋಧಿಸಿದ್ದೇನೆ. ಅಲ್ಲದೆ, ಮಂಗಳವಾರ ದೆಹಲಿ ಜಲ್ ಬೋರ್ಡ್ (ಡಿಜೆಬಿ) ತನ್ನ ಮುಸ್ಲಿಂ ಉದ್ಯೋಗಿಗಳಿಗೆ ರಮಝಾನ್ ಸಮಯದಲ್ಲಿ ಪ್ರತಿದಿನ ಎರಡು ಗಂಟೆಗಳ ಕಾಲ ಕೆಲಸದಿಂದ ವಿರಾಮವನ್ನು ಅನುಮತಿಸುವ ತನ್ನ ಆದೇಶವನ್ನು ಕೆಲವೇ ಗಂಟೆಗಳಲ್ಲಿ ರದ್ದುಗೊಳಿಸಿದ್ದು, ಈ ಆದೇಶವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರೋಧಿಸಿದೆ ಎಂದು ಉಪಾಧ್ಯಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಆದೇಶವು ಏಪ್ರಿಲ್ 3 ರಿಂದ ಮೇ 2 ರವರೆಗೆ ಅನ್ವಯಿಸುತ್ತದೆ ಎಂದು ನಾಗರಿಕ ಸಂಸ್ಥೆ ತಿಳಿಸಿದೆ.