ಪಾಟ್ನಾ: ಬಿಹಾರದ NDAಯ ಏಕೈಕ ಮುಸ್ಲಿಂ ಸಂಸದ ಮೆಹಬೂಬ್ ಅಲಿ ಕೈಸರ್ ಇಂದು ಆರ್ ಜೆಡಿಗೆ ಸೇರ್ಪಡೆಗೊಂಡಿದ್ದಾರೆ.
ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರ ಕಡೆಯಿದ್ದ ಕೈಸರ್ ಅವರಿಗೆ ಎಲ್ಜೆಪಿ ವಿಭಜನೆ ನಂತರ ಈ ಬಾರಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ಆರ್ಜೆಡಿ ಪಕ್ಷಕ್ಕೆ ಸೇರ್ಪಡೆಯಾದರು.
ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರ್ ರಾಜ್ಯವನ್ನು ಆಳಿದ ಕುಟುಂಬದಲ್ಲಿ ಜನಿಸಿದ ಕೈಸರ್ ಅವರು ಕಾಂಗ್ರೆಸ್ನೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2013 ರವರೆಗೆ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು. 2014ರಲ್ಲಿ ಅವರು ಎಲ್ ಜೆಪಿಗೆ ಸೇರಿ ಖಗರಿಯಾ ಸ್ಥಾನದಿಂದ ಗೆದಿದ್ದರು. ನಂತರ 2019ರ ಚುನಾವಣೆಯಲ್ಲೂ ಗೆದ್ದು ಸಂಸದರಾಗಿದ್ದಾರೆ.