ಕಾಂಗೋ : ಭಿನ್ನ ವಿಭಿನ್ನ ಫೋಟೋ ಪೋಸ್ ಗಳ ಮೂಲಕ ವಿಶ್ವದಾದ್ಯಂತ ವೈರಲ್ ಆಗಿದ್ದ ಗೊರಿಲ್ಲಾಗಳೆರಡರ ಪೈಕಿ ಒಂದು ಗೊರಿಲ್ಲಾ ಮೃತಪಟ್ಟಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ವಿರುಂಗಾ ನ್ಯಾಷನಲ್ ಪಾರ್ಕ್ ನಲ್ಲಿದ್ದ ”ನಡಕಸಿ” ಎಂಬ ಹೆಸರಿನ ಹೆಣ್ಣು ಗೊರಿಲ್ಲಾ ತನ್ನ 14 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದೆ.
ಈ ಕುರಿತು ವಿರುಂಗಾ ನ್ಯಾಷನಲ್ ಪಾರ್ಕ್ ಟ್ವೀಟ್ ಮಾಡಿ ನಡಕಸಿ ತನ್ನನ್ನು ನೋಡಿಕೊಳ್ಳುತ್ತಿದ್ದ ಅರಣ್ಯ ಸಿಬ್ಬಂದಿಯ ಎದೆಗಪ್ಪಿಕೊಂಡು ಪ್ರಾಣ ಬಿಟ್ಟಿರುವ ಫೋಟೋವನ್ನು ಹಂಚಿಕೊಂಡಿದ್ದು, ವಿಶ್ವದಾದ್ಯಂತ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದಾರೆ.
ಭಿನ್ನ ವಿಭಿನ್ನ ಸೆಲ್ಫಿಗಳಿಗೆ ಪೋಸ್ ನೀಡುವ ಮೂಲಕ ಕಾಂಗೋದಲ್ಲಿನ ಗೊರಿಲ್ಲಾ ಸಂರಕ್ಷಣೆ ಮಾಡುವ ವಿರುಂಗಾ ನ್ಯಾಷನಲ್ ಪಾರ್ಕ್ ನಲ್ಲಿರುವ ಎರಡು ಗೊರಿಲ್ಲಾಗಳು ಸುದ್ದಿಯಾಗಿದ್ದವು.