ನವದೆಹಲಿ: ಜೂನ್ 4ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ‘ಇಂಡಿಯಾ’ ಬಣವು ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಆ ಬಳಿಕ ಎನ್ಡಿಎ ಮೈತ್ರಿಕೂಟದಲ್ಲಿರುವ ಹಲವು ಪಕ್ಷಗಳು ‘ಇಂಡಿಯಾ’ ಬಣ ಸೇರಲು ಸರತಿ ಸಾಲಿನಲ್ಲಿ ನಿಲ್ಲಲಿವೆ ಎಂದು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
2019ರಲ್ಲಿ ಹೀನಾಯ ಫಲಿತಾಂಶ ಬಂದಿದ್ದ ಹಲವು ರಾಜ್ಯಗಳಲ್ಲಿ ಈ ಬಾರಿ ನಮ್ಮ ಪಕ್ಷ ಉತ್ತಮ ಪ್ರದರ್ಶನ ನೀಡಿದೆ ಎಂದು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಬಣ ಬದಲಿಸಲಿದ್ದಾರೆ ಎಂಬ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೂನ್ 4ರಂದು ನಿತೀಶ್ ಕುಮಾರ್ ಏನು ಮಾಡುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪದೇ ಪದೇ ನಿಷ್ಠೆ ಬದಲಿಸುವ ಹಳೆ ಚಾಳಿ ಅವರಿಗಿದೆ. ಅವರಿಲ್ಲದೆಯೇ ‘ಇಂಡಿಯಾ’ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಆಗ ಜೆಡಿಯು ಅಗತ್ಯವೇ ಇರುವುದಿಲ್ಲ’ ಎಂದು ಕುಟುಕಿದ್ದಾರೆ.