ನಾಗರಬಾವಿ ಸ್ಲಂ ನಿವಾಸಿಗಳ ಮನೆ ತೆರವು | BDA ಕ್ರಮವನ್ನು ಖಂಡಿಸಿದ NCHRO

Prasthutha|

ನಾಗರಬಾವಿ ರಿಂಗ್ ರೋಡ್ ಸ್ಲಮ್ ನಿವಾಸಿಗಳ ಮನೆಗಳನ್ನು ತೆರವು ಗೊಳಿಸಿರುವ BDA ಕ್ರಮವನ್ನು NCHRO ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

- Advertisement -

“ನಾಗರಬಾವಿ ರಿಂಗ್ ರೋಡಿನಲ್ಲಿ ಸುಮಾರು 10 ವರ್ಷಗಳಿಂದ 150 ಕುಟುಂಬಗಳು ವಾಸವಾಗಿದ್ದರು. ಇಂದು ಬೆಳಿಗ್ಗೆ BDA ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಸುಮಾರು 70 ಮನೆಗಳನ್ನು ತೆರವುಗೊಳಿಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಇದೇ ಜಾಗದಲ್ಲಿ ವಾಸವಿದ್ದ ಸ್ಲಮ್ ನಿವಾಸಿಗಳಿಗೆ ಈಗ ದಿಕ್ಕೇ ತೋಚದಂತಾಗಿದೆ. ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನೋಟೀಸ್ ನೀಡದೆ ಏಕಾಏಕಿ ಸ್ಲಮ್ ನಿವಾಸಿಗಳ ಮನೆಗಳನ್ನು ತೆರವುಗಳಿಸಿರುವುದರಿಂದ ಅಲ್ಲಿ ವಾಸಿಸುತ್ತಿದ್ದ ವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ” ಎಂದು NCHRO ರಾಜ್ಯಾಧ್ಯಕ್ಷರಾದ ಎಸ್. ಬಾಲನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ತಕ್ಷಣ ಮಧ್ಯೆಪ್ರವೇಶಿಸಿ BDA ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ನಾಗರಬಾವಿ ರಿಂಗ್ ರೋಡ್ ನ ಸ್ಲಮ್ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು NCHRO (ನ್ಯಾಷನಲ್ ಕಾನ್ಫೆಡೆರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ಸ್) ಈ ಮೂಲಕ ಆಗ್ರಹಿಸಿದೆ.

Join Whatsapp