ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ಭಾರತ ಪದ ಬಳಕೆಗೆ NCERT ನಿರ್ಧಾರ

Prasthutha|

ನವದೆಹಲಿ: NCERT ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದವನ್ನು ‘ಭಾರತ’ ಎಂದು ಬದಲಿಸಲು ಸೂಚಿಸಿದೆ.

- Advertisement -


G20 ಶೃಂಗಸಭೆಯ ಔತಣಕೂಟದ ಆಮಂತ್ರಣಗಳು ದ್ರೌಪದಿ ಮುರ್ಮು ಅವರನ್ನು ‘ಭಾರತದ ರಾಷ್ಟ್ರಪತಿ’ ಎಂದು ಉಲ್ಲೇಖಿಸಿದಾಗ ಇಂಡಿಯಾ & ಭಾರತ ಚರ್ಚೆ ಪ್ರಾರಂಭವಾಯಿತು. ಅಲ್ಲದೆ ಹಲವು ಟೀಕೆ ವ್ಯಕ್ತವಾಗಿತ್ತು.


ಶಾಲಾ ಪಠ್ಯಕ್ರಮವನ್ನು ಪರಿಶೀಲಿಸಲು NCERT, ಸಮಾಜ ವಿಜ್ಞಾನಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು ಮತ್ತು ಈ ಸಮಿತಿಯು ಪಠ್ಯಪುಸ್ತಕಗಳಲ್ಲಿ ಇಂಡಿಯಾವನ್ನು ಭಾರತ ಎಂದು ಬದಲಾಯಿಸಲು ಸಲಹೆ ನೀಡಿದೆ.

Join Whatsapp