ನೇಪಾಳಕ್ಕೆ ಭಾರತದ ನೂತನ ರಾಯಭಾರಿಯಾಗಿ ನವೀನ್ ಶ್ರೀವಾಸ್ತವ ನೇಮಕ

Prasthutha|

ನವದೆಹಲಿ: ನೇಪಾಳಕ್ಕೆ ಭಾರತದ ನೂತನ ರಾಯಭಾರಿಯಾಗಿ ಅನುಭವಿ ರಾಜತಾಂತ್ರಿಕ ನವೀನ್ ಶ್ರೀವಾಸ್ತವ ಅವರನ್ನು ನೇಮಿಸಲಾಗಿದೆ.

- Advertisement -

ನೇಪಾಳದ ಲುಂಬಿನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಒಂದು ದಿನದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ನೇಮಕಾತಿಯನ್ನು ಪ್ರಕಟಿಸಿದೆ. 1993 ರ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆ (IFS), ಪ್ರಸ್ತುತ MEA ನಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಶ್ರೀವಾಸ್ತವ ಸೇವೆ ಸಲ್ಲಿಸುತ್ತಿದ್ದಾರೆ.

“ಸದ್ಯ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ನವೀನ್ ಶ್ರೀವಾಸ್ತವ ಅವರನ್ನು ನೇಪಾಳಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ. ಅವರು ಶೀಘ್ರದಲ್ಲೇ ನಿಯೋಜನೆಗೊಳ್ಳುವ ಸಾಧ್ಯತೆ ಇದೆ ಎಂದು ಎಂಇಎ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಈ ಹಿಂದೆ ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ವಿನಯ್ ಮೋಹನ್ ಕ್ವಾತ್ರಾ ಅವರು ಸೇವೆ ಸಲ್ಲಿಸುತ್ತಿದ್ದರು.



Join Whatsapp