ನೌಶಾದ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

Prasthutha|

ಮಂಗಳೂರು: ಇತ್ತೀಚೆಗೆ ನಿಧನರಾದ ಮರ್’ಹೂಮ್ ನೌಶಾದ್ ಹಾಜಿ ಸೂರಲ್ಪಾಡಿಯವರ ಸ್ಮರಣಾರ್ಥ ನೌಶಾದ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅನ್ನು ರಚಿಸಲಾಗಿದೆ.

- Advertisement -


ಟ್ರ್ರಸ್ಟ್ ರಚನೆಯ ಸಭೆಯು ಝಾರಾ ಆಡಿಟೋರಿಯಮ್ ಗಂಜಿಮಠದಲ್ಲಿ 30-01-2023ರಂದು ಸೋಮವಾರ ಸಂಜೆ 5 ಘಂಟೆಗೆ ಸರಿಯಾಗಿ ಸಲಹಾ ಸಮಿತಿಯ ಉಪಸ್ಥಿತಿಯಲ್ಲಿ ಜರುಗಿತು.
ಅಧ್ಯಕ್ಷರಾಗಿ ಆಸೀಫ್ ಸೂರಲ್ಪಾಡಿ ಆದರ್ಶ್, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಇ.ಕೆ.ಎ ಸಿದ್ದೀಕ್ ಅಡ್ಡೂರು, ಕೋಶಾಧಿಕಾರಿಯಾಗಿ ಮುಸ್ತಫಾ ಇಂಜಿನಿಯರ್ ಅಡ್ಡೂರು ದೆಮ್ಮಲೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಾಕ್ಷರಾಗಿ ಶಾಫಿ ಮೂಲರಪಟ್ನ, ಲತೀಫ್ ಗುರುಪುರ, ಆಸೀಫ್ ಫರಂಗಿಪೇಟೆ ಇವರನ್ನು ಆಯ್ಕೆ ಮಾಡಲಾಯಿತು.


ವರ್ಕಿಂಗ್ ಸೆಕ್ರೆಟರಿಯಾಗಿ ಅಬ್ದುಲ್ ಹಮೀದ್ ಕಣ್ಣೂರು, ಸಂಘಟಣಾ ಕಾರ್ಯದರ್ಶಿಯಾಗಿ ಝಕರಿಯಾ ಪರ್ವೆಝ್, ಜೊತೆ ಕಾರ್ಯದರ್ಶಿಯಾಗಿ ಎಮ್.ಎಸ್. ಸಾಲಿ ಮತ್ತು ಹಾಶಿರ್ ಫರಂಗಿಪೇಟೆ, ಮೀಡಿಯ ಸೆಕ್ರೆಟರಿ ಇಮ್ರಾನ್ ಅಡ್ಡೂರು ಮತ್ತು ಸಲೀಂ ಮಲಿಕ್ ಫರಂಗಿಪೇಟೆ, ಲೀಗಲ್ ಆಡ್ವೈಸರ್ ಆಗಿ ಇಸಾಕ್ ವಕೀಲರು ಕಡಬ ಮತ್ತು ಹಬೀಬುರ್ರಹ್’ಮಾನ್ ವಕೀಲರು ಬಿ.ಸಿ.ರೋಡ್, ಲೆಕ್ಕ ಪರಿಶೋಧಕರಾಗಿ ಯಾಸೀರ್ ಮೂಡಬಿದ್ರೆ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಸಲಹಾ ಸಮಿತಿಯ ಸದಸ್ಯರಾದ ರಫೀಕ್ ಮಾಸ್ಟರ್ ನೇರವೇರಿಸಿದರು.
ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆಸೀಫ್ ಆದರ್ಶ್ ಸುರಲ್ಪಾಡಿ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿಯಾದ ಡಾ.ಇ.ಕೆ.ಎ ಸಿದ್ದೀಕ್ ಅಡ್ಡೂರು ಮತ್ತು ಕೋಶಾಧಿಕಾರಿಯಾದ ಮುಸ್ತಫಾ ದೆಮ್ಮೆಲೆ ಅವರು ಸಂಧರ್ಬೋಚಿತವಾಗಿ ಮಾತಾನಾಡಿದರು.

- Advertisement -


ಸಲಹಾ ಸಮಿತಿಯ ಸದಸ್ಯರಾದ ಎಮ್.ಎಚ್,ಮೊಯಿದಿನ್ ಹಾಜಿ ಮಾಜಿ ಮೇಯರ್, ಕೆ ಅಶ್ರಫ್, ಉಸ್ಮಾನ್ ಏರ್ ಇಂಡಿಯಾ, ಮತ್ತು ನೌಶಾದ್ ಹಾಜಿಯ ಸಹೋದರ ಅಬ್ದುಲ್ ಸತ್ತಾರ್ ಮುಂತಾದವರು ನೂತನ ಸಮಿತಿಗೆ ಸಲಹೆಯನ್ನು ನೀಡಿದರು. ಜೊತೆ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಧನ್ಯವಾದಗೈದರು. ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪಕ್ರಿಯೆಯ ಮುಂಚಿತವಾಗಿ ಸೂರಲ್ಪಾಡಿ ಮಸೀದಿಗೆ ತೆರಳಿ ನೌಶಾದ್ ಹಾಜಿಯವರ ಖಬರ್ ಸಂದರ್ಶನ ಮಾಡಲಾಯಿತು.



Join Whatsapp