ಯುಎಇಯಲ್ಲಿ 43 ದೇಶದ ಪ್ರಜೆಗಳಿಗೆ ಲೈಸನ್ಸ್ ಪಡೆಯಲು ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ!

Prasthutha|

ದುಬೈ: ಯುಎಇಗೆ ಬರುವ ಬಹುತೇಕ ಮಂದಿಯ ಮೊದಲ ಆಸೆ ಎಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಾಗಿದೆ.

- Advertisement -

ಮತ್ತೊಂದು ವಾಸ್ತವವೆಂದರೆ ಹೆಚ್ಚಿನ ಜನರು ಹಲವಾರು ಬಾರಿ ಪರೀಕ್ಷೆಗೆ ಹಾಜರಾಗಿ ನಂತರ ಲೈಸನ್ಸ್ ಪಡೆಯುತ್ತಾರೆ. ಆದರೆ ಕೆಲವು ಪ್ರಜೆಗಳಿಗೆ ಯುಎಇಯಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಾವುದೇ ಪರೀಕ್ಷೆಯ ಅಗತ್ಯವಿಲ್ಲ.

ಯುಎಇ ಸರ್ಕಾರ ಗುರುತಿಸಿದ 43 ದೇಶಗಳ ಪ್ರಜೆಗಳು ಯುಎಇ ಆಂತರಿಕ ಸಚಿವಾಲಯದ ಮಾರ್ಕೂಸ್ ಸೇವೆಯ ಸದುಪಯೋಗವನ್ನು ಪಡೆದು ಯಾವುದೇ ಪರೀಕ್ಷೆಗಳಿಗೆ ಹಾಜರಾಗದೆ ತಮ್ಮ ದೇಶದ ಡ್ರೈವಿಂಗ್ ಲೈಸೆನ್ಸ್‌ಗಳನ್ನು ಯುಎಇ ಚಾಲನಾ ಪರವಾನಗಿಗಳಾಗಿ ಪರಿವರ್ತಿಸಬಹುದಾಗಿದೆ.

- Advertisement -

ನಿವಾಸ ವೀಸಾ ಹೊಂದಿರುವ ಅನಿವಾಸಿಗಳಿಗೆ ಈ ಸೌಲಭ್ಯ ಲಭ್ಯವಿದೆ. ಪರೀಕ್ಷೆಗಳಿಲ್ಲದೆ ತಮ್ಮ ದೇಶದ ಚಾಲನಾ ಪರವಾನಗಿಯನ್ನು ಬಳಸಿಕೊಂಡು ಯುಎಇಯಲ್ಲಿ ಲೈಸನ್ಸ್ ಪಡೆಯಬಹುದಾದ ದೇಶಗಳ ಪಟ್ಟಿಯನ್ನು ಯುಎಇ ಆಂತರಿಕ ಸಚಿವಾಲಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಆ 43 ದೇಶಗಳ ಹೆಸರು ಇಲ್ಲಿದೆ…

  1. Estonia
  2. Albania
  3. Portugal
  4. China
  5. Hungary
  6. Greece
  7. Ukraine
  8. Bulgaria
  9. Slovak
  10. Slovenia
  11. Serbia
  12. Cyprus
  13. Latvia
  14. Luxembourg
  15. Lithuania
  16. Malta
  17. Iceland
  18. Montenegro
  19. United State of America
  20. France
  21. Japan
  22. Belgium
  23. Switzerland
  24. Germany
  25. Italy
  26. Sweden
  27. Ireland
  28. Spain
  29. Norway
  30. New Zealand
  31. Romania
  32. Singapore
  33. Hong Kong
  34. Netherlands
  35. Denmark
  36. Austria
  37. Finland
  38. United Kingdom
  39. Turkey
  40. Canada
  41. Poland
  42. South Africa
  43. Australia

Join Whatsapp