ರಾಷ್ಟ್ರೀಯ ಸ್ಮಾರ್ಟ್​ ಸಿಟಿ ಪ್ರಶಸ್ತಿ: ಕರ್ನಾಟಕದ 3 ನಗರಗಳು ಆಯ್ಕೆ

Prasthutha|

ಹೊಸದಿಲ್ಲಿ: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ಅತ್ಯುತ್ತಮ ‘ರಾಷ್ಟ್ರೀಯ ಸ್ಮಾರ್ಟ್​ ಸಿಟಿ ಪ್ರಶಸ್ತಿ’ಯಲ್ಲಿ ಇಂದೋರ್ ಮೊದಲ ಸ್ಥಾನ ಪಡೆದುಕೊಂಡಿದೆ.

- Advertisement -

ಅನುಕ್ರಮವಾಗಿ ಸೂರತ್ ಹಾಗೂ ಆಗ್ರಾ ನಗರಗಳಿಗೆ ಎರಡನೇ ಮತ್ತು ಮೂರನೇ ಸ್ಥಾನ ಸಿಕ್ಕಿದೆ. ಹಾಗೆಯೇ ರಾಜ್ಯದಿಂದ ಮೂರು ನಗರಗಳು ಪ್ರಶಸ್ತಿಗೆ ಭಾಜನವಾಗಿವೆ. ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ, ನವೀನ ಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಹಾಗೂ ವಲಯ ಸ್ಮಾರ್ಟ್​ ಸಿಟಿ ವಿಭಾಗದಲ್ಲಿ ಬೆಳಗಾವಿ ಆಯ್ಕೆಯಾಗಿದೆ.

ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿತು. ಪ್ರಶಸ್ತಿಯನ್ನು ಸೆಪ್ಟೆಂಬರ್​ 27ರಂದು ಇಂದೋರ್​ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಲಿದ್ದಾರೆ. ಇದರೊಂದಿಗೆ ಇತರೆ ವಿಭಿನ್ನ ವಿಭಾಗದಲ್ಲಿ ಇತರೆ ನಗರಗಳು 66 ಪ್ರಶಸ್ತಿಗಳನ್ನು ಪಡೆದಿವೆ.

- Advertisement -

ಉತ್ತಮ ರಾಜ್ಯ ಪ್ರಶಸ್ತಿಯಲ್ಲಿ ಮಧ್ಯಪ್ರದೇಶಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಎರಡನೇ ಸ್ಥಾನ ತಮಿಳುನಾಡಿಗೆ ಬಂದಿದೆ. ಇದೇ ರೀತಿ ಮೂರನೇ ಸ್ಥಾನವನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶ ಜಂಟಿಯಾಗಿ ಪಡೆದಿವೆ. ಕೇಂದ್ರಾಡಳಿತ ವಿಭಾಗದಲ್ಲಿ ಚಂಡೀಗಢ ಮೊದಲ ಸ್ಥಾನವನ್ನು ಪಡೆದಿದೆ. ಇ-ಆಡಳಿತ ಸೇವೆಯನ್ನು ಗುರುತಿಸಿ ಉತ್ತಮ ಸರ್ಕಾರದ ವಿಭಾಗದಲ್ಲಿ ಮತ್ತೊಂದು ಪ್ರಶಸ್ತಿ ಕೊಡಲಾಗಿದೆ.

ಇಂದೋರ್ ದೇಶದ ಸ್ವಚ್ಛ ನಗರಿ:

ಸತತ ಆರನೇ ಬಾರಿಯೂ ಇಂದೋರ್​ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಉತ್ತಮ ಮಾದರಿ ರಸ್ತೆ’ ನಿರ್ಮಾಣಕ್ಕಾಗಿ ‘ಉತ್ತಮ ವಾತಾವರಣ ನಿರ್ಮಾಣ’ ವಿಭಾಗದಲ್ಲಿ ಕೊಯಮತ್ತೂರ್​ ಉತ್ತಮ ಸಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆರ್ಥಿಕತೆಯ ವಿಭಾಗದಲ್ಲಿ ಜಬಲ್ಪುರ ಮೊದಲ ಸ್ಥಾನ ಪಡೆದಿದ್ದರೆ, ಎರಡು ಹಾಗೂ ಮೂರನೇ ಸ್ಥಾನವನ್ನು ಇಂದೋರ್ ಹಾಗೂ ಲಕ್ನೋ ಪಡೆದಿವೆ.

 ಅದೇ ರೀತಿ ಸಚಿವಾಲಯ ಪ್ರಕಾರ, ‘ಪಬ್ಲಿಕ್ ಬೈಕ್ ಶೇರಿಂಗ್​ ಜೊತೆಗೆ ಸೈಕಲ್ ಟ್ರ್ಯಾಕ್ಸ್​’ಗೆ ಚಲನಶೀಲತೆಯ ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಚಂಢೀಗಡ ಪಡೆದುಕೊಂಡಿದೆ. ‘ಗಾಳಿಯ ಗುಣಮಟ್ಟ ಅಭಿವೃದ್ಧಿ ಹಾಗೂ ಅಹಿಲ್ಯಾ ವಾನ್​ ಮತ್ತು ವರ್ಟಿಕಲ್ ಗಾರ್ಡನ್​’ ಕಾರಣಕ್ಕಾಗಿ ‘ನಗರ ಎನ್ವಿರಾನ್​ಮೆಂಟ್’ ವಿಭಾಗದಲ್ಲಿ ಇಂದೋರ್​​ಗೆ​ ಮತ್ತೊಂದು ಉತ್ತಮ ಸಿಟಿ ಪ್ರಶಸ್ತಿಯೂ ಲಭಿಸಿದೆ.

ಸಂರಕ್ಷಣಾ ಸ್ಥಳದ ಅಭಿವೃದ್ಧಿ ಹಾಗೂ ಹಳೆಯ ನಗರಗಳಿಗೆ ಇ-ಆಟೋ ಪೂರೈಕೆ ಉಪಕ್ರಮಕ್ಕೆ ಶಿವಮೊಗ್ಗ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರಶಸ್ತಿ ಪಡೆದಿವೆ.



Join Whatsapp