ಶಾಲೆ, ಕಾಲೇಜು, ಮದ್ರಸಾಗಳಲ್ಲಿ ಆ.11 ರಿಂದ 17ರವರೆಗೆ ರಾಷ್ಟ್ರಧ್ವಜ ಹಾರಾಟ: ಬಿ.ಸಿ.ನಾಗೇಶ್

Prasthutha|

ಬೆಂಗಳೂರು: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಅಂಗವಾಗಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳು, ಎಲ್ಲ ಮದ್ರಸಾಗಳಲ್ಲಿ ಆ.11 ರಿಂದ 17ರವರೆಗೆ ಭಾರತ ಧ್ವಜಾರೋಹಣ ಅಭಿಯಾನ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದಾರೆ.

- Advertisement -

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಮೂಲಕ ಸೂಚನೆ ನೀಡಿರುವ ಅವರು, ಬೋಧಕ ಮತ್ತು ಬೋಧಕೇತರರು ತಮ್ಮ ಮನೆಗಳ ಮೇಲೆ ರಾಷ್ವ್ರ ಧ್ವಜಾರೋಹಣ ಮಾಡಬೇಕು ಎಂದು ತಿಳಿಸಿದ್ದಾರೆ.

ಇದರ ಅಂಗವಾಗಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳು, ಎಲ್ಲ ಮದ್ರಸಾಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನವನ್ನು ಮೆಲುಕು ಹಾಕುವ ಗೀತೆ ಗಾಯನ, ಕ್ವಿಜ್, ಪ್ರಬಂಧ ಬರೆಯುವ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.



Join Whatsapp