ಡಿ.2ರ ವರೆಗೆ ‘ಮಹಿಳಾ ಸುರಕ್ಷತೆ, ಸಾಮೂಹಿಕ ಜವಾಬ್ದಾರಿ’ ರಾಷ್ಟ್ರೀಯ ಅಭಿಯಾನ: WIM

Prasthutha|

ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯು “ಮಹಿಳಾ ಸುರಕ್ಷತೆ, ಸಾಮೂಹಿಕ ಜವಾಬ್ದಾರಿ” ಎಂಬ ಘೋಷವಾಕ್ಯದಡಿ ದೇಶಾದ್ಯಂತ ಅಕ್ಟೋಬರ್ 2 ರಿಂದ ಡಿಸೆಂಬರ್ 2 ವರೆಗೆ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ.

- Advertisement -

WIM ರಾಷ್ಟ್ರಾಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ರಾಷ್ಟ್ರ ಮಟ್ಟದ ಮತ್ತು ಅಕ್ಟೋಬರ್ 3 ರಂದು ರಾಜ್ಯಾಧ್ಯಕ್ಷೆ ಫಾತಿಮ ನಸೀಮ ರಾಜ್ಯ ಮಟ್ಟದ ಪತ್ರಿಕಾಗೋಷ್ಠಿ, ಪೋಸ್ಟರ್ ಬಿಡುಗಡೆ ಹಾಗೂ ವೀಡಿಯೋ ಬಿಡುಗಡೆ ಮೂಲಕ ಅಭಿಯಾನವನ್ನು ಉದ್ಘಾಟಿಸಿದರು.

ಪತ್ರಿಕಾಗೋಷ್ಠಿಯ ನಿರ್ಧಾರಗಳು…..

- Advertisement -

” ಸಮಾನ ಮಾನಸಿಕ ಸಾಮರ್ಥ್ಯಗಳನ್ನು ಹೊಂದಿರುವ ಮಹಿಳೆಯರು ಪುರುಷರ ಒಡನಾಡಿ ಗಳಾಗಿದ್ದಾರೆ ” ಎಂದು ಹೇಳಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಯವರ ಜನ್ಮದಿನಾಚರಣೆಯಂದು ಈ ಅಭಿಯಾನಕ್ಕೆ ಮುನ್ನುಡಿ ಬರೆಯುತ್ತಿರುವುದು, ಮಹಿಳಾ ಪರ ಗಾಂಧಿ ತತ್ವಗಳನ್ನು ಸಾಕಾರಗೊಳಿಸುವ ಪ್ರಯತ್ನದ ಭಾಗವಾಗಿದೆ.

ಸಾಮಾಜಿಕ ಅನ್ಯಾಯಕ್ಕೆ ಒಳಗಾಗುತ್ತಿರುವ ಮಹಿಳೆಗೆ ತ್ವರಿತ ನ್ಯಾಯ , ಸುರಕ್ಷತೆಯನ್ನು   ಒದಗಿಸುವಲ್ಲಿ  ಸಾಮಾಜದ ಜವಾಬ್ದಾರಿಯನ್ನು ತಿಳಿಯಪಡಿಸುವುದೇ  ಅಭಿಯಾನದ ಬಹುಮುಖ್ಯ ಉದ್ದೇಶ.

# ಅನ್ಯಾಯದ ಬಂಧನ,  ಸಾಕ್ಷ್ಯಾಧಾರಗಳು ದುರ್ಬಲವಾಗಿದ್ದರೂ ಜಾಮೀನು ನಿರಾಕರಣೆ, ವಿಳಂಬವಾಗುತ್ತಿರುವ ವಿಚಾರಣಾ ಪ್ರಕ್ರಿಯೆ ಹಾಗೂ UAPA ಕಾನೂನುಗಳ ದುರ್ಬಳಕೆಗಳಿಂದ ವರ್ಷಗಳು ಕಳೆದರೂ ಕೈದಿಗಳಾಗಿ ಸೆರೆವಾಸದಲ್ಲಿರುವ ಸಾಮಾಜಿಕ ಹೋರಾಟಗಾರ್ತಿಯರ ತ್ವರಿತ ನ್ಯಾಯ ವ್ಯವಸ್ಥೆಯ ಮೂಲಕ ಬಿಡುಗಡೆಗೆ ಸರ್ಕಾರಗಳು ಬದ್ದವಾಗಬೇಕು.ವಿಚಾರಣಾ ಅವಧಿಗಳಲ್ಲಿ ಲಿಂಗ ಸೂಕ್ಷ್ಮತೆಯನ್ನು ಆಧರಿಸಿ ಮಹಿಳಾ ಅಧಿಕಾರಿಗಳನ್ನು ನೇಮಿಸಬೇಕು.

# ಗುಂಪು ಹತ್ಯೆಗಳಂತಹ ಅಮಾನುಷ, ಅನ್ಯಾಯದ ಕ್ರೌರ್ಯಕ್ಕೆ ಬಲಿಯಾದವರ ಮಹಿಳೆಯರು ಮತ್ತು ಮಕ್ಕಳಿಗೆ ಆರ್ಥಿಕ ಪರಿಹಾರವನ್ನು ಒದಗಿಸಿ, ಭದ್ರತೆಯನ್ನು ಖಾತರಿ ಪಡಿಸಬೇಕು.ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಸನ್ನಿವೇಶಗಳು ನಿರ್ಮಾಣವಾಗುತ್ತಿದ್ದು , ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು.  ವಿಧವೆಯರಾದ ಮಹಿಳೆಯರಿಗೆ   ರಾಜ್ಯ ಅನುದಾನಿತ ಪುನರ್ವಸತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

# ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಿಳಾ ಮೀಸಲಾತಿಯನ್ನು ಮರುಸ್ಥಾಪಿಸಬೇಕು.

# ವಿಧ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕಾಗಿರುವ ಹಿಜಾಬನ್ನು  ಮರಳಿ ನೀಡಿ ಅವರ ಶೈಕ್ಷಣಿಕ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು.

 # ತೀವ್ರವಾಗುತ್ತಿರುವ   ಅತ್ಯಾಚಾರ,ಲೈಂಗಿಕ ಶೋಷಣೆ ಅಥವಾ ಇನ್ನಿತರ ದೌರ್ಜನ್ಯಗಳ ಪ್ರಕರಣಗಳನ್ನು ನಿಭಾಯಿಸುವಲ್ಲಿ  ಪೋಲೀಸ್ ನಿಷ್ಕ್ರಿಯತೆಯು ಪದೇ ಪದೇ ಸಾಬೀತಾಗುತ್ತಿದ್ದು ನಿರ್ಲಕ್ಷ್ಯ ಅಧಿಕಾರಿಗಳನ್ನು ವಜಾಗೊಳಿಸಬೇಕು.ಆರೋಪಿಗಳು ಮೇಲ್ವರ್ಗದವರಾಗಿರುವ ಪ್ರಕರಣಗಳಲ್ಲಿ FIR ದಾಖಲಿಸಲು ಕೂಡ ಪೋಲೀಸರು ಹಿಂದೇಟು ಹಾಕುತ್ತಿರುವುದು ಸ್ತ್ರೀ ಕುಲಕ್ಕೆ ಎಸಗುವ ಅಪಚಾರವಾಗಿದೆ. ದುರ್ಬಲ ಕಾನೂನು ವ್ಯವಸ್ಥೆ, ಪೋಲೀಸರ ಪಕ್ಷಪಾತ ಹಾಗೂ ತಾರತಮ್ಯ ನೀತಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯವು  ಮರೀಚಿಕೆಯಾಗುವಂತೆ ಮಾಡುತ್ತಿದೆ.

ಒಂಟಿ ಮಹಿಳೆಯು ಮಧ್ಯ ರಾತ್ರಿಯಲ್ಲಿ ಸ್ವತಂತ್ರವಾಗಿ ನಡೆದಾಡಲು ಸಾಧ್ಯವಾದರೆ ಅದಾಗಿದೆ ನೈಜ ಸ್ವಾತಂತ್ರ್ಯ ಎಂದು ಹೇಳಿದ ಗಾಂಧಿಯ ಮಾತುಗಳು ಸಾಕಾರಗೊಳ್ಳಲು ಅಸಾಧ್ಯವೇನಲ್ಲ. ಪ್ರಬಲ ಕಾನೂನುಗಳು ಪೂರ್ಣ ಪ್ರಮಾಣದಲ್ಲಿ, ತ್ವರಿತ ಗತಿಯಲ್ಲಿ ಅನುಷ್ಠಾನಗೊಂಡರೆ  ಮಹಿಳೆ ಎಂದೆಂದಿಗೂ  ಸುರಕ್ಷಿತಳು‌ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಪ್ರತಿಪಾದಿಸುತ್ತದೆ.

ಸ್ತ್ರೀ ವಿರೋಧಿಯಾಗಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರ ಕಳವಳ ವ್ಯಕ್ತಪಡಿಸುತ್ತದೆ ‌ಹಗೂ ಬಲವಾಗಿ ಖಂಡಿಸುತ್ತದೆ.ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮಹಿಳಾ ಸುರಕ್ಷತೆಯನ್ನು ಖಾತ್ರಿಪಡಿಸಬೇಕು

ಅಭಿಯಾನದ ಅಂಗವಾಗಿ  ಪ್ರತಿಯೊಂದು ಜಿಲ್ಲೆಯಲ್ಲಿ ವಿವಿಧ ಗೋಷ್ಠಿಗಳನ್ನು ನಡೆಸುವುದು,ಭಿತ್ತಿಪತ್ರ ಅಂಟಿಸುವುದು, ಸಾಮಾಜಿಕ ಕಾರ್ಯಕರ್ತೆಯರ ಭೇಟಿ, ಕರಪತ್ರಗಳ ವಿತರಣೆ ,ಪ್ರತಿಭಟನೆ, ಕ್ಯಾಂಡಲ್ ಮಾರ್ಚ್ ಮುಂತಾದ

ಜನಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ.

 ಹಿಂಸಾಚಾರ, ತಾರತಮ್ಯ ಮುಕ್ತ ಸುರಕ್ಷಿತ, ನಿರ್ಭೀತ ವಾತಾವರಣ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹಿಸುತ್ತದೆ.

ಈ ವೇಳೆ          WIM     ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ, ನೌರೀನ್ ಆಲಂಪಾಡಿ, ನಿಶಾ ವಾಮಂಜೂರ್, ಝಾಹಿದಾ ಪುತ್ತೂರ್ ರೇಶ್ಮ,  ಶಮೀಮ ಉಪಸ್ಥಿತರಿದ್ದರು.



Join Whatsapp