ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ | ಪಿ.ಟಿ. ಉಷಾ ದಾಖಲೆ ಮುರಿದ ಕೊಡಗಿನ ಕುವರಿ ಉನ್ನತಿ ಅಯ್ಯಪ್ಪ

Prasthutha|

ಬೆಂಗಳೂರು : 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಕುವರಿ ಉನ್ನತಿ ಅಯ್ಯಪ್ಪ ಹರ್ಡಲ್ಸ್ ವಿಭಾಗದಲ್ಲಿ ಪಿ.ಟಿ. ಉಷಾ ಅವರ ದಾಖಲೆಯನ್ನು ಮುರಿದಿದ್ದಾರೆ.

- Advertisement -

ಅಸ್ಸಾಂನ ಗುವಾಹತಿಯಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ 80 ಮೀಟರ್ ಹರ್ಡಲ್ಸ್ ನಲ್ಲಿ ಮತ್ತು 300 ಮೀಟರ್ ಹರ್ಡಲ್ಸ್ ನಲ್ಲಿ ಉನ್ನತಿ ಹೊಸ ದಾಖಲೆ ಬರೆದಿದ್ದಾಳೆ.

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬೊಳ್ಳಂಡ ಉನ್ನತಿ ಅಯ್ಯಪ್ಪ, 80 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ 11.50 ಸೆಕೆಂಡ್ಸ್ ನಲ್ಲಿ ಗುರಿ ತಲುಪುವ ಮೂಲಕ ನೂತನ ದಾಖಲೆ ಸೃಷ್ಟಿಸಿ, ಚಿನ್ನದ ಪದಕ ಪಡೆದುಕೊಂಡಿದ್ದಾಳೆ. 300 ಮೀಟರ್ಸ್ ಹರ್ಡಲ್ಸ್ ನಲ್ಲೂ 40.11 ಸೆಕೆಂಡ್ ಗಳಲ್ಲಿ ಸಾಧನೆ ಮಾಡಿ, ಚಿನ್ನದ ಪದಕ ಗೆದ್ದಿದ್ದಾಳೆ.

- Advertisement -

16 ವರ್ಷ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಉನ್ನತಿ, ಕೊಡಗಿನ ಮಾಜಿ ಕ್ರೀಡಾಪಟು ಬೊಳ್ಳಂಡ ಪ್ರಮೀಳಾ ಹಾಗೂ ಅಂತಾರಾಷ್ಟ್ರೀಯ ಅಥ್ಲೀಟ್, ಪ್ರಸ್ತುತ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಆಗಿರುವ ಬೊಳ್ಳಂಡ ಅಯ್ಯಪ್ಪ ದಂಪತಿಯ ಮಗಳು.

1979ರಲ್ಲಿ ಭಾರತದ ಹೆಸರಾಂತ ಕ್ರೀಡಾ ತಾರೆ ಪಿ.ಟಿ. ಉಷಾ ಅವರು 16 ವರ್ಷದೊಳಗಿನ ಅಥ್ಲೆಟಿಕ್ಸ್ ಕೂಟದಲ್ಲಿ ಈ ವಿಭಾಗದಲ್ಲಿ 12.2 ಸೆಕೆಂಡ್ಸ್ ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು 1985ರಲ್ಲಿ ಕರ್ನಾಟಕದ ಎ.ಎನ್. ರೇಖಾ ಸರಿಗಟ್ಟಿದ್ದರು. ಇದೀಗ ಉನ್ನತಿ ಈ ಇಬ್ಬರನ್ನೂ ಮೀರಿ 11:50 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ, ಹೊಸ ಇತಿಹಾಸ ಸೃಷ್ಟಿಸಿದ್ದಾಳೆ.

300 ಮೀಟರ್ ಹರ್ಡಲ್ಸ್ ನಲ್ಲಿ ಪಶ್ಚಿಮ ಬಂಗಾಳದ ಯುವತಿಯ ಹೆಸರಲ್ಲಿದ್ದ ದಾಖಲೆಯನ್ನು ಉನ್ನತಿ ಮುರಿದಿದ್ದಾಳೆ. ಉನ್ನತಿಗೆ ಆಕೆಯ ತಂದೆಯೇ ಕೋಚಿಂಗ್ ನೀಡಿದ್ದಾರೆ.



Join Whatsapp