ನವಭಾರತದ ಆಶಯವೇ ಎನ್​ಡಿಎ: ಪ್ರಧಾನಿ ಮೋದಿ ವ್ಯಾಖ್ಯಾನ

Prasthutha|

ಹೊಸದಿಲ್ಲಿ: ಎನ್​ಡಿಎ (NDA) ಎಂದರೆ N- ನವ ಭಾರತ, D- ಅಭಿವೃದ್ಧಿ, A- ಆಶಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವ್ಯಾಖ್ಯಾನಿಸಿದರು.

- Advertisement -

ಎನ್​ಡಿಎ ಸಭೆ ನಂತರ ಮಾತನಾಡಿದ ಅವರು, ನಮಗೆ ದೇಶ ಮೊದಲು, ಪ್ರಗತಿ ಮೊದಲು, ಜನರ ಸಬಲೀಕರಣ ಮೊದಲು ಎಂಬ ಸಂದೇಶವನ್ನು ಸಾರಿದರು. ಜತೆಗೆ, ಪ್ರತಿಪಕ್ಷಗಳ ಮಹಾಮೈತ್ರಿ (INDIA) ವಿರುದ್ಧ ವಾಗ್ದಾಳಿ ನಡೆಸಿದರು.

ಬೇರೊಬ್ಬರನ್ನು ಅಧಿಕಾರದಿಂದ ಕೆಳಗಿಳಸಬೇಕು ಎಂಬುದಷ್ಟೇ ಪ್ರತಿಪಕ್ಷಗಳ ಮಹಾಮೈತ್ರಿಯ ಉದ್ದೇಶ. ಆದರೆ, ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಬೇಕೆಂಬುದು ಎನ್​ಡಿಎ ಮೈತ್ರಿಕೂಟದ ಆಶಯ ಎಂದು ಮೋದಿ ಹೇಳಿದರು.

- Advertisement -

ಬಿಜೆಪಿ ನೇತೃತ್ವದ ಎನ್​ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದೇ ಕಾರಣಕ್ಕೆ ಬಡವರು ಮತ್ತು ರೈತರಿಗೆ ಎನ್​ಡಿಎ ಮೇಲೆ ನಂಬಿಕೆ ಬಂದಿದೆ. ಇದರ ಜೊತೆಗೆ ಬಡತನ ನಿರ್ಮೂಲನೆಯೇ ಎನ್​ಡಿಎ ಸರ್ಕಾರದ ಗುರಿಯಾಗಿದ್ದು, ಸಾಮಾಜಿಕ ನ್ಯಾಯ ಕೊಡುವ ಕಾರ್ಯ ಮಾಡಿದೆ ಎಂದು ಮೋದಿ ಹೇಳಿದರು.

Join Whatsapp