ನರೇಂದ್ರ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

Prasthutha|

ಮಾಸ್ಕೊ: ಪ್ರಧಾನಿ ನರೇಂದ್ರ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎನ್ನಲಾದ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪಾಸಲ್‌ ದಿ ಫಸ್ಟ್ ಕಾಲ್ಡ್’ ಎಂಬ ಪ್ರಶಸ್ತಿಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್‌ನ ಸೇಂಟ್ ಕ್ಯಾಥರೀನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದ್ದಾರೆ.

- Advertisement -

ಬಳಿಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ನರೇಂದ್ರ ಮೋದಿ, ರಷ್ಯಾದ ಅತ್ಯುನ್ನತ ಪ್ರಶಸ್ತಿಯನ್ನು ತಮಗೆ ನೀಡಿದ್ದಕ್ಕಾಗಿ ವ್ಲಾಡಿಮಿರ್ ಪುಟಿನ್‌ರಿಗೆ ಧನ್ಯವಾದಗಳು. ಈ ಪ್ರಶಸ್ತಿಯನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸುವೆ ಹಾಗೂ ಭಾರತ- ರಷ್ಯಾದ ಶತಮಾನಗಳ ಸ್ನೇಹ ಹಾಗೂ ಪರಸ್ಪರ ನಂಬಿಕೆಗೆ ಈ ಗೌರವ ಪ್ರಾಪ್ತವಾಗಿದೆ. ನಿಮ್ಮ (ಪುಟಿನ್‌) ಎರಡುವರೆ ದಶಕದ ನಾಯಕತ್ವದಲ್ಲಿ ಭಾರತ -ರಷ್ಯಾ ಸಂಬಂಧ ಎಲ್ಲ ಕೋನಗಳಿಂದಲೂ ಗಟ್ಟಿಯಾಗಿದ್ದು, ಹೊಸ ಎತ್ತರಕ್ಕೆ ಏರಿದೆ ಎಂದು ಹೇಳಿದರು.

ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರಿಯಾಕ್ಕೆ ತೆರಳಿದ್ದಾರೆ. ರಾಜಧಾನಿ ವಿಯೆನ್ನಾ ತಲುಪಿದ ನಂತರ ಅವರು ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರನ್ನ ಭೇಟಿ ಮಾಡಲಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.

Join Whatsapp