ನರಬಲಿ, ಸಂಘಪರಿವಾರದವರ ಮೂಢನಂಬಿಕೆಯ ಫಲ: ಕೇರಳ ಸಚಿವೆ

Prasthutha|

ಕೊಚ್ಚಿ: ಇಬ್ಬರ ಮಹಿಳೆಯರನ್ನು ನಿಧಿಯಾಸೆಗೆ ಬಲಿ ಕೊಟ್ಟಿರುವ ಮೂಢನಂಬಿಕೆ ಉತ್ತರ ಭಾರತದಲ್ಲಿ ನಡೆದಿದ್ದರೆ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಪ್ರಜ್ಞಾವಂತರಿರುವ  ಕೇರಳದಲ್ಲಿ ಇಂತಹ ಪ್ರಕರಣಗಳು ಮುಚ್ಚಿಹೋಗಲು ಸಾಧ್ಯವಿಲ್ಲ. ಸಂಘ ಪರಿವಾರದವರು ಕೇರಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನುಗ್ಗಲು ನೋಡುತ್ತಿರುವುದು ಇಂತಹ ನರಬಲಿ ಪ್ರಕರಣಕ್ಕೆ ಕಾರಣವಿರಬಹುದು ಎಂದು ಕೇರಳದ ರಾಜ್ಯ ಸಚಿವೆ ಡಾ. ಆರ್. ಬಿಂದು ಹೇಳಿದ್ದಾರೆ.

- Advertisement -

ಇಬ್ಬರ ಮಹಿಳೆಯರನ್ನು ನಿಧಿಯಾಸೆಗೆ ಬಲಿ ಕೊಟ್ಟಿರುವುದು, ಮೂಢನಂಬಿಕೆ ಇನ್ನೂ ಅಸ್ತಿತ್ವದಲ್ಲಿರುವುದರ ಧ್ಯೋತಕ. ಸಂಘ ಪರಿವಾರದವರು ಮೂಢನಂಬಿಕೆಗಳನ್ನು ಕೇರಳದಲ್ಲಿ ಮತ್ತೆ ಹೆಚ್ಚಿಸಲು ಪ್ರಯತ್ನಿಸುವುದರ ಫಲವಾಗಿ ಈ ನರಬಲಿಯು ನಡೆದಿರುವ  ಸಾಧ್ಯತೆಯಿದೆ. ಸಮಗ್ರ ತನಿಖೆಯ ಬಳಿಕ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಕೋರ್ಟಿನಲ್ಲಿ ವಾದ ಮಂಡಿಸಲಾಗುವುದು ಎಂದು ಸಚಿವೆ ಬಿಂದು ತಿಳಿಸಿದರು.

“ಭಾರತದಲ್ಲಿ ಮೂಢನಂಬಿಕೆ ಆಳವಾಗಿ ಬೇರು ಬಿಟ್ಟಿದೆ. ಕೇರಳ ಇದಕ್ಕೆ ಹೊರತಲ್ಲವಾದರೂ ಇಲ್ಲಿನ ಜನರ ಅರಿವು ನರಬಲಿಯಂಥವುಗಳಿಂದ ಹೊರ ಬರುವಂತೆ ಮಾಡಿದೆ. ಆದರೆ ಇತ್ತೀಚೆಗೆ ಸಂಘ ಪರಿವಾರ, ಬಿಜೆಪಿಗರು ಮತ್ತೆ ಮೂಢನಂಬಿಕೆ ಬೇರೂರುವಂತೆ ಪ್ರಯತ್ನಿಸುತ್ತಿರುವುದರಿಂದ ಕೇರಳದಲ್ಲಿ ಈ ನರಬಲಿ ನಡೆದಿದೆ” ಎಂದು ಡಾಕ್ಟರ್ ಬಿಂದು ನೇರವಾಗಿ ಆರೋಪಿಸಿದರು.

- Advertisement -

ಭಗವಾಲ್ ಸಿಂಗ್ ಮತ್ತು ಲೈಲಾ ದಂಪತಿ ಈ ನರಬಲಿ ನಡೆಸಿದ್ದರೆ, ಶಾಫಿ ಎಂಬಾತ ಎರಡು ಬಡ ಲಾಟರಿ ಟಿಕೆಟ್ ಮಾರುವ ಮಹಿಳೆಯರನ್ನು ಅಪಹರಿಸಿ ಅವರಿಗೆ ಒಪ್ಪಿಸಿದ್ದಾನೆ. ಜಾಗತೀಕರಣವು ಎಲ್ಲರಲ್ಲೂ ವೇಗವಾಗಿ ಹಣ ಮಾಡಬೇಕು ಎಂಬ ತುಡಿತ ಹೆಚ್ಚಿಸಿದೆ. ಅದೂ ಈ ನರಬಲಿಯ ಹಿಂದಿದೆ ಎಂದೂ ಸಚಿವೆ ವ್ಯಾಖ್ಯಾನಿಸಿದರು.



Join Whatsapp