ಬೆಂಗಳೂರು: ಕೆಎಂಎಫ್’ನ ನಂದಿನಿ ಹಾಲು ಕಳಪೆ ಗುಣಮಟ್ಟ ಹೊಂದಿದೆ. ಹಾಗಾಗಿ ಕೇರಳಿಗರು ಆ ಹಾಲನ್ನು ಬಳಸಬಾರದು ಎಂದು ಕೇರಳದ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ ದರ್ಪದ ಮಾತನಾಡಿದ್ದಾರೆ.
ಶುಕ್ರವಾರ ಮಲಪ್ಪುರಂನಲ್ಲಿ ಮಿಲ್ಮಾದ (ಕೇರಳ ಹಾಲು ಒಕ್ಕೂಟ) ಮಾರಾಟ ಮಳಿಗೆ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ ವರದಿ ಮಾಡಿದೆ.
ಕೇರಳದಲ್ಲಿ ಕೆಎಂಎಫ್ ತನ್ನ ಮಾರಾಟವನ್ನು ವಿಸ್ತರಿಸಲು ನೋಡುತ್ತಿದೆ. ಇದು ಅನೈತಿಕವಾದದ್ದು. ಕರ್ನಾಟಕ ತಕ್ಷಣವೇ ಇದನ್ನು ನಿಲ್ಲಸದಿದ್ದರೆ ನಾವು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ ದೂರು ನೀಡಲಿದ್ದೇವೆ ಎಂದು ಹೇಳಿದ್ದಾರೆ.