ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತ: ಕೆಎಂಎಫ್ ಎಂಡಿ ಹೇಳಿದ್ದೇನು?

Prasthutha|

ಬೆಂಗಳೂರು: ಕೇರಳದಲ್ಲಿ ನಂದಿನಿ ಮಾರುಕಟ್ಟೆ ವಿಸ್ತರಣೆಗೆ ವಾಪಸ್ ಬೆನ್ನಲ್ಲೇ ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕೆಎಂಎಫ್ ನ ನಂದಿನಿ ತುಪ್ಪವನ್ನು ಪೂರೈಸಲು ಆಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಬಳ್ಳಾರಿಯಲ್ಲಿ ಹೇಳಿದ್ದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿಟಿ ರವಿ, ಕಾಂಗ್ರೆಸ್ ತನ್ನ ಅಜೆಂಡಾ ಸಾಧಿಸಲು ಸುವರ್ಣ ಕರ್ನಾಟಕದ ಹೆಸರು ಹಾಳು ಮಾಡುತ್ತಿದೆ ಎಂದು ವೆಬ್ ಸೈಟ್ ಒಂದರ ತುಣುಕನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.


ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ತಡೆ ವಿಚಾರವಾಗಿ ಮಾತನಾಡಿದ ಕೆಎಂಎಫ್ ಎಂಡಿ ಜಗದೀಶ್, ಒಂದೂವರೆ ವರ್ಷದ ಹಿಂದೆಯೇ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿದೆ. 2021-22ರಲ್ಲಿ 345 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಿದ್ದೇವೆ. ಟೆಂಡರ್ ಮೂಲಕ ಭಾಗವಹಿಸಿದರೆ ನಮ್ಮ ರೈತರಿಗೆ ನಷ್ಟವಾಗುತ್ತದೆ. ಕಳೆದ ಬಾರಿ ನಾವು ಬಿಡ್ಡಿಂಗ್ ನಲ್ಲಿ L3 ಇದ್ದರೂ ಖರೀದಿಸಿದ್ದಾರೆ. ಕೆಎಂಎಫ್ ನಿಂದಲೇ ನಂದಿನಿ ತುಪ್ಪ ಖರೀದಿಸಿದ್ದಾರೆ. ಈಗಲೂ ನಮ್ಮ ಬೆಲೆಗೆ ಖರೀದಿಸಲು ಸಿದ್ಧರಿದ್ದರೆ ಪೂರೈಕೆ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲ, ಈಗ ನಿಲ್ಲಿಸಿದ್ದಾರೆ ಅನ್ನೋದು ಸುಳ್ಳು ಎಂದರು.

Join Whatsapp