ಮಣಿಪಾಲ: ಮಣಿಪಾಲ ಇನ್ಸ್ಟಿಟ್ಯೂಶನ್ ಆಫ್ ಕಮ್ಯುನಿಕೇಶನ್ ಇದರ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ನಮ್ಮ ಅಂಗಡಿ 2022’ ಉದ್ಘಾಟನಾ ಕಾರ್ಯಕ್ರಮವು ಎಂಐಸಿ ಕ್ಯಾಂಪಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಳೆದ 19 ವರುಷಗಳಿಂದ ‘ನಮ್ಮ ಭೂಮಿ’ ಸಂಸ್ಥೆಯ ಸಹಯೋಗದಲ್ಲಿ ಉದಾತ್ತ ಉದ್ದೇಶವನ್ನು ನಿರ್ವಹಿಸುತ್ತಾ ಬಂದಿರುವುದಕ್ಕಾಗಿ ಸಂಸ್ಥೆಯನ್ನು ಅವರು ಅಭಿನಂದಿಸಿದರು. “ಸಂವಹನ ವಿಭಾಗವು ಉಡುಪಿಯ ಸಂಸ್ಕೃತಿಯನ್ನು ಅನ್ವೇಷಿಸಲು ಹಾಗೂ ಅರಿವು ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕಿದೆ” ಎಂದರು.
ಸಂಸ್ಥೆಯ ನಿರ್ದೇಶಕ ಡಾ.ಪದ್ಮಾ ರಾಣಿ ಮಾತನಾಡಿ, “ಕೋವಿಡ್ ಕಾರಣದಿಂದ ಕಳೆದ ಎರಡು ವರುಷಗಳಲ್ಲಿ ಆಫ್ ಲೈನ್ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು. ಈ ಮೂಲಕ ಸ್ಥಳೀಯ ಕುಶಲಕರ್ಮಿಗಳಿಗೆ ವೇದಿಕೆ ಕಲ್ಪಿಸಿದ್ದೆವು” ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಐಡಿಪಿ ಎಜ್ಯುಕೇಶನ್ ಇದರ ಬ್ಯುಸಿನೆಸ್ ಡೆವಲಪ್ಮೆಂಟ್ ನ ಹಿರಿಯ ಕಾರ್ಯನಿರ್ವಹಣಾಧಿಕಾರಿ ಶಿಜೋಮನ್ ಯೇಸುದಾಸ್, ಸೆಲ್ಕೋ ಸಂಸ್ಥೆ ಸಿಇಓ ಗುರುಪ್ರಕಾಶ್ ಶೆಟ್ಟಿ, ಕಾರ್ಯಕ್ರಮದ ಸಂಯೋಜಕಿ ಸೌಪರ್ಣಿಕಾ ಪವನ್ ಕುಮಾರ್ ಅತ್ತಾವರ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಷಣ್ಮುಖ ಅನಘ್ ಸ್ವಾಗತಿಸಿ, ಉರ್ಬಿ ಚಂದಾ ವಂದಿಸಿದರು.