ನಮಾಝ್ ಮುಗಿಸಿ ಹಿಂದಿರುಗುತ್ತಿದ್ದ ಮಸೀದಿ ಇಮಾಂ ಸಹಿತ ಇಬ್ಬರು ಮುಸ್ಲಿಮರ ಮೇಲೆ ಹಲ್ಲೆ

Prasthutha|

ಗಾಝಿಯಾಬಾದ್: ಅಸರ್ ನಮಾಝ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಸೀದಿ ಇಮಾಂ ಸಹಿತ ಇಬ್ಬರ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದಿದೆ.

- Advertisement -

ಮಸೀದಿಯಿಂದ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ಮಸೀದಿ ಇಮಾಂ ಮತ್ತು ಜೊತೆಗಿದ್ದ ಬಾಲಕನನ್ನು ತಡೆದು ನಿಲ್ಲಿಸಿದ ಗೂಂಡಾಗಳು ಅವರಿಬ್ಬರ ಮೇಲೂ ತೀವ್ರ ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಧಾರ್ಮಿಕವಾಗಿಯೂ ನಿಂದಿಸಿದ ಹಲ್ಲೆಕೋರರು ಪಾಕಿಸ್ತಾನಿಗಳು ಎಂದು ಕರೆದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಬಳಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ‌.

ಹಿಂದುತ್ವದ ಗೂಂಡಾಗಳು ಹಲ್ಲೆ ನಡೆಸಿದ 1.52 ನಿಮಿಷದ ವೀಡಿಯೋವನ್ನು ಅಶೋಕ್ ಸ್ವೈನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸ್ವಯಂಘೋಷಿತ ಹಿಂದೂ ರಾಷ್ಟ್ರೀಯವಾದಿಗಳು ಇಮಾಂ ಸಹಿತ ಇಬ್ಬರು ಮುಸ್ಲಿಮರಿಗೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವರನ್ನು ಪಾಕಿಸ್ತಾನಿಗಳು ಎಂದು ಕರೆದಿದ್ದು, ಭಾರತ್ ಮಾತಾ ಕಿ ಜೈ ಎಂದು ಹೇಳುವಂತೆ ಒತ್ತಾಯ ಮಾಡಿದ್ದಾರೆ’ ಎಂದು ಬರೆದಿದ್ದಾರೆ.

Join Whatsapp