ಕಾನೂನು ನಿಯಮದಡಿ ನಾವೇ ಟೋಲ್ ತೆರವು ಮಾಡುತ್ತೇವೆ: ನಳಿನ್ ಕುಮಾರ್ ಕಟೀಲ್

Prasthutha|

ಮಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅವಕಾಶವಿದೆ. ಅದಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಕಾನೂನು ಪ್ರಕಾರವಾಗಿ ನಾವೇ ಟೋಲ್ ತೆರವು ಮಾಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

- Advertisement -

ಮಂಗಳವಾರ ಮಾಧ್ಯಮಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಟೋಲ್ಗೇಟ್ ತೆರವು ಮಾಡದವರು ಈಗ ಹೋರಾಟ ಮಾಡುತ್ತಿರುವುದು ರಾಜಕೀಯ ನಾಟಕ. ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸಚಿವರಾಗಿದ್ದ ವೇಳೆ ಅವರು ಯಾಕೆ ಮನವಿ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಗುಜರಾತ್ನ ಮೊರ್ಬಿಯದಲ್ಲಿ ಕೇಬಲ್ ಬ್ರಿಜ್ ಕುಸಿತ ನಮಗೆಲ್ಲಾ ಎಚ್ಚರಿಕೆಯಾಗಿದ್ದು, ಜಿಲ್ಲೆಯಾದ್ಯಂತ ಇರುವ ಹಳೆಯ ತೂಗು ಸೇತುವೆಗಳನ್ನು ತಂತ್ರಜ್ಞರಿಂದ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ನಳಿನ್ ಹೇಳಿದರು.

Join Whatsapp