ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ & ಸೆಷನ್ಸ್ ಕೋರ್ಟ್ನಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ಸೆಪ್ಟೆಂಬರ್ 11ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.
ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಹೊತ್ತಿ ಉರಿದಿತ್ತು.
ಸದ್ಯ ನಾಗಮಂಗಲ ಪಟ್ಟಣ ಇದೀಗ ಸಹಜಸ್ಥಿತಿಗೆ ಮರಳಿದೆ. ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿವೆ. ಆದರೆ ಗಲಾಟೆಯಲ್ಲಿ ಕೆಲವು ಅಮಾಯಕರ ಬಂಧನವಾಗಿದ್ದು, ಸದ್ಯ ಅವರಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.