‘ನಾ ಕಾವೂಂಗಾ ನಾ ಖಾನೆ ದೂಂಗಾ’ ಎಂದು ಹೇಳಿದ್ದು ದನದ ಮಾಂಸದ ಬಗ್ಗೆ ಇರಬೇಕು: ಮೋದಿಯ ಕಾಲೆಳೆದ ಶಶಿ ತರೂರ್

Prasthutha|

ನವದೆಹಲಿ: ಬಿಜೆಪಿಗೆ ಸೇರಿದ ಮೇಲೆ ಭ್ರಷ್ಟಾಚಾರದ ತನಿಖೆಗಳನ್ನು ಕೈಬಿಡಲಾಗಿರುವವರ ಪಟ್ಟಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಡುಗಡೆ ಮಾಡಿದ್ದಾರೆ.

- Advertisement -


ಪ್ರಧಾನಿ ಮೋದಿಯವರು ನಾ ಕಾವೂಂಗಾ ನಾ ಖಾನೆ ದೂಂಗಾ ಎಂದು ಹೇಳಿದ್ದು ದನದ ಮಾಂಸದ ಬಗ್ಗೆ ಇರಬೇಕು ಎಂದು ತರೂರ್ ಪ್ರಧಾನಿಯವರ ಕಾಲೆಳೆದಿದ್ದಾರೆ.
ಎಎಪಿ ನಾಯಕ, ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ದಿಲ್ಲಿ ಅಬಕಾರಿ ಭ್ರಷ್ಟಾಚಾರದ ಮೇಲೆ ಐದು ದಿನಗಳ ಸಿಬಿಐ ಕಸ್ಟಡಿಗೆ ಕೊಟ್ಟ ಬೆನ್ನಿಗೆ ಶಶಿ ತರೂರು ಈ ಬಿಜೆಪಿ ಸೇರಿರುವ ಭ್ರಷ್ಟಾಚಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.


ಅವರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಎಂಟು ಹೆಸರುಗಳು ವೈರಲ್ ಆಗಿವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಮಾಜಿ ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಂಗಾಳದ ಸುವೇಂಧು ಅಧಿಕಾರಿ, ಮಹಾರಾಷ್ಟ್ರದ ಭಾವನಾ ಗೌಳಿ, ಯಶವಂತ್ ಜಾಧವ್, ಯಾಮಿನಿ ಜಾಧವ್, ಪ್ರತಾಪ್ ಸರ್ನಾಯಕ್ ಮತ್ತು ನಾರಾಯಣ ರಾಣೆ. ಇವರೆಲ್ಲ ಬಿಜೆಪಿ ಸೇರಿದವರು ಇಲ್ಲವೇ ಮೈತ್ರಿ ಕೂಟದವರು.

- Advertisement -


ಇವರ ಪಟ್ಟಿಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಶಶಿ ತರೂರ್ ಅವರು ಇವರು ಬಿಜೆಪಿ ಸೇರುತ್ತಲೇ ಇವರ ಮೇಲಿನ ಭ್ರಷ್ಟಾಚಾರದ ಆರೋಪ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.
“ಇದು ಸುತ್ತು ಹೊಡೆಯುತ್ತಿದೆ, ಹಾಗಾಗಿ ಹಂಚಿಕೊಳ್ಳುವಿಕೆ ಮನ್ನಣೆ ಪಡೆದಿದೆ. ನಾನು ತಿನ್ನಲಾರೆ, ತಿನ್ನಲು ಬಿಡಲಾರೆ ಎಂಬುದರ ಬಗ್ಗೆ ಅಚ್ಚರಿ ಹೊಂದಿದ್ದೇನೆ. ಅವರು ಇದನ್ನು ದನದ ಮಾಂಸದ ಬಗ್ಗೆ ಹೇಳಿರಬೇಕು ಎನಿಸುತ್ತದೆ. ಪ್ರಧಾನಿಯವರ ಭ್ರಷ್ಟಾಚಾರದ ವಿರುದ್ಧದ ಘೋಷಣೆಗೆ ಇನ್ನೇನು ಅರ್ಥವಿದೆ ಎಂದೂ ತರೂರ್ ಕುಟುಕಿದ್ದಾರೆ.
ಭಾನುವಾರ ಸಿಸೋಡಿಯಾರನ್ನು ಎಂಟು ಗಂಟೆಗಳ ವಿಚಾರಣೆಯ ಬಳಿಕ ಸಿಬಿಐ ಬಂಧಿಸಿತ್ತು; ಐದು ದಿನಗಳ ಸಿಬಿಐ ಕಸ್ಟಡಿಗೂ ನೀಡಿದೆ. ಈಗ 2021- 22ರ ಅಬಕಾರಿ ನೀತಿಯನ್ನು ಕೈಬಿಡಲು ನೋಡುತ್ತಿದೆ. ಅದು ಎಎಪಿಗೆ ಲಾಭಕರ ಎಂಬುದು ಬಿಜೆಪಿ ಆಪಾದನೆ.



Join Whatsapp