ದೇವಸ್ಥಾನದ ಹುಂಡಿಗೆ 8 ಲಕ್ಷ ರೂ. ಮೊತ್ತದ 2000 ರೂ. ನೋಟುಗಳನ್ನು ಹಾಕಿದ ಭಕ್ತ!

Prasthutha|

ಶಿಮ್ಲಾ: ಭಾರತೀಯ ರಿಸರ್ವ್ ಬ್ಯಾಂಕ್​ (RBI) 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೇ 19ರಂದು ಘೋಷಿಸಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದೆ.

- Advertisement -

ಆದರೆ, ಈ ಮಧ್ಯೆ ಭಕ್ತರೊಬ್ಬರು ದೇವಸ್ಥಾನದ ಕಾಣಿಕೆ ಹುಂಡಿಗೆ ಬರೋಬ್ಬರಿ 8 ಲಕ್ಷ ರೂಪಾಯಿ ದೇಣಿಗೆ ಹಾಕುವ ಮೂಲಕ ಸುದ್ದಿಯಾಗಿರುವ ಘಟನೆ ಹಿಮಾಚಲಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ನಡೆದಿದೆ.

ಕಂಗ್ರಾದಲ್ಲಿರುವ ಮಾ ಜ್ವಾಲಾ ದೇವಿ ದೇವಸ್ಥಾನದ ಕಾಣಿಕೆ ಹುಂಡಿಗೆ ವ್ಯಕ್ತಿ ಒಬ್ಬರು 2,000 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 400 ನೋಟುಗಳನ್ನು ಹಾಕಿದ್ದಾರೆ. ಅಂದರೆ 8 ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಶ್​ ಕುಮಾರ್​ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆಗಾಗ ಇಂತಹ ಕಾಣಿಕೆಗಳನ್ನು ನೀಡುತ್ತಿರುತ್ತಾರೆ. ಹುಂಡಿಯಲ್ಲಿ ದೊರಕಿರುವ ಹಣವನ್ನು ಸಂಪೂರ್ಣವಾಗಿ ಭಕ್ತರ ಸೌಲಭ್ಯಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.



Join Whatsapp