ಮೈಸೂರಿನ ಫಾರೂಕಿಯಾ ಬಾಲಕಿಯರ ಪ್ರೌಢಶಾಲೆ ರೀ ಓಪನ್

Prasthutha|

►SDPI ಹೋರಾಟಕ್ಕೆ ಸಂದ ಜಯ: ಅಬ್ದುಲ್ ಮಜೀದ್ ಮೈಸೂರು

- Advertisement -

ಮೈಸೂರು: ಉಚ್ಚ ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ಮೊಹರು ಹಾಕಿದ್ದ ಫಾರೂಕಿಯಾ ಬಾಲಕಿಯರ ಪ್ರೌಢಶಾಲೆ ಮತ್ತೆ ಪುನಾರಂಭಗೊಂಡಿದೆ.  ಗುರುವಾರ  ರಾತ್ರಿ 8:30 ಕ್ಕೆ ಅಧಿಕಾರಿಗಳು ಶಾಲೆಗೆ ಹಾಕಿದ್ದ ಬೀಗ ತೆರವುಗೊಳಿಸಿದ್ದಾರೆ.

ಮೈಸೂರಿನ ಫಾರೂಕಿಯಾ ಬಾಲಕಿಯರ ಪ್ರೌಢಶಾಲೆ ರೀ ಓಪನ್, “ಸತ್ಯಮೇವ ಜಯತೇ”, ಇದು “SDPI ಹೋರಾಟಕ್ಕೆ ಸಂದ ಜಯ” ಎಂದು SDPI ರಾಜ್ಯಾಧ್ಯಕ್ಷ  ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಕಳೆದ ತಿಂಗಳು ರಾತ್ರೋ ರಾತ್ರಿ ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿರುವ ಫಾರೂಕಿಯಾ ಬಾಲಕಿಯರ ಪ್ರೌಢಶಾಲೆಗೆ ಅಧಿಕಾರಿಗಳು ಬೀಗ ಜಡಿದಿದ್ದರು.ಇದನ್ನು ಖಂಡಿಸಿ ವಿದ್ಯಾರ್ಥಿಗಳು, ಪೋಷಕರು ಮತ್ತು ಇತರರಿಂದ ಪ್ರತಿಭಟನೆಗಳು ನಡೆದಿದ್ದವು.

ಲೀಸ್ ಅವಧಿ ಮುಗಿದಿದೆ ಎಂಬ ನೆಪವೊಡ್ಡಿ ಮೈಸೂರಿನ ಫಾರೂಖಿಯಾ ಗರ್ಲ್ಸ್ ಹೈಸ್ಕೂಲ್’ಗೆ ಬೀಗ ಜಡಿದ ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿದ್ದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಮಸ್ಯೆಯನ್ನು ಬಗೆಹರಿಸದಿದ್ದರೆ ಮೈಸೂರು ಬಂದ್ ಮಾಡಿ ಪ್ರತಿಭಟಿಸಲಾಗುವುದಾಗಿ ಎಚ್ಚರಿಸಿದ್ದರು.

ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಮೈಸೂರಿನ ಫಾರೂಕಿಯಾ ಕಾಲೇಜಿಗೆ ಬೀಗ ಜಡಿದಿರುವುದರಿಂದ ಸುಮಾರು 450 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನ್ಯಾಯವಾಗಿದ್ದನ್ನು ವಿರೋಧಿಸಿ SDPI ಪ್ರತಿಭಟನೆ ಕೂಡ ಹಮ್ಮಿಕೊಂಡಿತ್ತು.

 ಯಾವುದೇ ಮುನ್ಸೂಚನೆ ನೀಡದೆ ಕಳ್ಳರ ಹಾಗೇ ಶಾಲೆಗೆ ಬೀಗ ಹಾಕಿರುವ ಜಿಲ್ಲಾಡಳಿತದ ನಡೆ ಖಂಡನೀಯ. ಕೋವಿಡ್’ನಿಂದಾಗಿ ವಿದ್ಯಾರ್ಥಿಗಳು ಈಗಾಗಲೇ 2 ವರ್ಷ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ನ್ಯಾಯಾಲಯ ಆದೇಶವೆಂದು ಬಿಂಬಿಸಿ ಶಾಲೆಗೆ ಬೀಗ ಜಡಿದಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜಿಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಯನ್ನು ಪೋಷಕರು, ಜನಪ್ರತಿನಿಧಿಗಳು ಮತ್ತು ಆಡಳಿತ ಸಮಿತಿಯೊಂದಿಗೆ ಚರ್ಚಿಸಿ ಬಗೆಹರಿಸಬೇಕು ಎಂದು ಅಬ್ದುಲ್ ಮಜೀದ್ ಮನವಿ ಮಾಡಿದ್ದರು.

ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ಜಿಲ್ಲಾಡಳಿತ ಚೆಲ್ಲಾಟವಾಡದೆ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಿ. ಒಂದು ವೇಳೆ ಎರಡು ದಿನಗಳ ಒಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ SDPI ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಬೀಗ ಒಡೆಯಲಿದ್ದಾರೆ ಮತ್ತು ಮೈಸೂರು ಬಂದ್ ಮಾಡಲಾಗುವುದು ಎಂದು SDPI ರಾಜ್ಯಾಧ್ಯಕ್ಷರು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.



Join Whatsapp