ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿಂದು ಅರಮನೆಯಿಂದ ಬನ್ನಿಮಂಟಪದವರೆಗೆ 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ, ಆಚಾರ-ವಿಚಾರ, ಭೌಗೋಳಿಕ ಹಿನ್ನೆಲೆ ಹಾಗೂ ಇಲಾಖಾವಾರು, ನಿಗಮ ಮಂಡಳಿ , ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ 51 ಸ್ತಬ್ಧಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದೆ.
- ಯಾದಗಿರಿ ಜಿಲ್ಲೆ – ತಿಂಥಣಿ ಮೌನೇಶ್ವರ ದೇವಾಲಯ
- ಕೊಡಗು ಜಿಲ್ಲೆ – ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ -ಕಾಳುಮೆಣಸು ತೋಟ ಹಾಗೂ ಆನೆ ಕ್ಯಾಂಪ್
- ರಾಯಚೂರು ಜಿಲ್ಲೆ – ಮುದ್ಗಲ್ ಕೋಟೆ ಮತ್ತು ಗಾಣದಾಳ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
- ಚಾಮರಾಜನಗರ ಜಿಲ್ಲೆ – ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು
- ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ – ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ
- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ – ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ
- ವಿಜಯನಗರ ಜಿಲ್ಲೆ – ವಿಜಯನಗರ ಸಾಮ್ರಾಜ್ಯದ ವೈಭವ
- ಬೆಂಗಳೂರು ನಗರ ಜಿಲ್ಲೆ – ರಾಷ್ಟಪಿತ ಮಹಾತ್ಮಗಾಂಧೀಜಿ ಮತ್ತು ವಿಧಾನಸೌಧ
- ಬೀದರ್ ಜಿಲ್ಲೆ – ಕನ್ನಡ ಪಟ್ಟದೇವರು ಪೂಜ್ಯಶ್ರೀ ಮದ್ ಘನಲಿಂಗ ಚಕ್ರವರ್ತಿ ಚೆನ್ನಬಸವ ಪಟ್ಟದೇವರು
- ಕೊಪ್ಪಳ ಜಿಲ್ಲೆ – ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ, ಹಿರೇಬೆಣಕಲ್ ಶಿಲಾ ಸಮಾಧಿ, ಇಟಗಿಯ ಮಹದೇವ ದೇವಾಲಯ
- ಪ್ರವಾಸೋದ್ಯಮ ಇಲಾಖೆ – ಒಂದು ರಾಜ್ಯ ಹಲವು ಜಗತ್ತುಗಳು
- ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ – ನಿಗಮದ ಉತ್ಪನ್ನಗಳ ಮಾದರಿ
- ಉತ್ತರ ಕನ್ನಡ ಜಿಲ್ಲೆ – ಮುರುಡೇಶ್ವರದ ಬೃಹತ್ ಶಿವನ ಮೂರ್ತಿ
- ಬೆಂಗಳೂರು ಗ್ರಾಮಾಂತರ ಜಿಲ್ಲೆ – ಪೊಕ್ಕುಂದ/ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ಲು ದುರ್ಗ, ಬಿನ್ನ ಮಂಗಲ ದೇವಸ್ಥಾನ
- ದಾವಣಗೆರೆ ಜಿಲ್ಲೆ – ನಾವು ಮನುಜರು
- ಕೋಲಾರ ಜಿಲ್ಲೆ – ವಿಶ್ವವಿಖ್ಯಾತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪರಿಚಯ
- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ – ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ
- ಕಾರ್ಮಿಕ ಇಲಾಖೆ – ಕಾರ್ಮಿಕರ ಹಿತ ರಕ್ಷಣೆ
- ಉಡುಪಿ ಜಿಲ್ಲೆ – ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು
- ಶಿವಮೊಗ್ಗ ಜಿಲ್ಲೆ – ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ
- ಬಳ್ಳಾರಿ ಜಿಲ್ಲೆ – ಕುರುಗೋಡು ದೇವಸ್ಥಾನ
- ಬಾಗಲಕೋಟೆ ಜಿಲ್ಲೆ – ರತ್ನನ ಕಾವ್ಯ ಗದಾಯುದ್ಧ
- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ – ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು
- ಸಮಾಜ ಕಲ್ಯಾಣ ಇಲಾಖೆ – ಸಮ ಸಮಾಜ ನಿರ್ಮಾಣಕ್ಕಾಗಿ
- ಹಾವೇರಿ ಜಿಲ್ಲೆ – ಏಲಕ್ಕಿ ಕಂಪಿನ ನಾಡು ಹಾಗೂ ಸಂತರ, ಸಾಹಿತಿಗಳ ನೆಲೆಬೀಡು
- ಮಂಡ್ಯ ಜಿಲ್ಲೆ – ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು
- ರಾಮನಗರ ಜಿಲ್ಲೆ – ರಾಮನಗರ ಜಿಲ್ಲಾ ವೈವಿಧ್ಯತೆಗಳು
- ಕಲಬುರ್ಗಿ ಜಿಲ್ಲೆ – ತೊಗರಿಯ ಕಣಜ ಕಲಬುರ್ಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು
- ಕಾವೇರಿ ನೀರಾವರಿ ನಿಗಮ – ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ
- ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ – ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
- ವಿಜಯಪುರ ಜಿಲ್ಲೆ – ಬಸವನಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ
- ದಕ್ಷಿಣ ಕನ್ನಡ ಜಿಲ್ಲೆ – ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ
- ಮೈಸೂರು ಜಿಲ್ಲೆ – ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ
- ಬೆಳಗಾವಿ ಜಿಲ್ಲೆ – ಕಿತ್ತೂರು ಕದನದ 200ನೇ ವರ್ಷಾಚರಣೆ
- ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ – ಸಿಎಫ್ಟಿಆರ್ಐ ಮೈಸೂರು – ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ
- ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ – ಇಲಾಖೆಯ ಕಿರು ಪರಿಚಯ
- ಚಿತ್ರದುರ್ಗ ಜಿಲ್ಲೆ – ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು
- ಚಿಕ್ಕ ಬಳ್ಳಾಪುರ ಜಿಲ್ಲೆ – ನಂದಿರೋಪ್ ವೇ
- ಗದಗ ಜಿಲ್ಲೆ – ಗ್ರಾಮ ಸಭೆ-ಹಳ್ಳಿಯ ವಿಧಾನಸಭೆ
- ಧಾರವಾಡ ಜಿಲ್ಲೆ – ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು
- ಭಾರತೀಯ ರೈಲ್ವೆ – ವಂದೇ ಭಾರತ್ ಎಕ್ಸ್ಪ್ರೆಸ್
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ಹೆಣ್ಣು ಭ್ರೂಣಹತ್ಯೆ ತಡೆ ಅಂಧತ್ವ ಶ್ರವಣ ದೋಷ ನಿವಾರಣ ಕಾರ್ಯಕ್ರಮ
- ಹಾಸನ ಜಿಲ್ಲೆ – ವಿಶ್ವ ಪಾರಂಪರಿಕ ತಾಣ ಬೇಲೂರು ಮತ್ತು ಹಳೆಬೀಡು
- ಚಿಕ್ಕಮಗಳೂರು ಜಿಲ್ಲೆ – ತೇಜಸ್ವಿ ವಿಸ್ಮಯ ಲೋಕ
- ತುಮಕೂರು ಜಿಲ್ಲೆ – ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ದರಬೆಟ್ಟ ಮತ್ತು ಬಯಲುಸೀಮೆಯನ್ನಾಳಿದ ಹೆಮ್ಮೆಯ ಅರಸರು
- ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ – ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳು
- ವಾರ್ತಾ ಇಲಾಖೆ – ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ – ನಿಮ್ಮ ಮನೆಯೇ ನಿರಂತರ ಪಾಠಶಾಲೆ
- ಕೌಶಲ್ಯಾಭಿವೃದ್ಧಿ ಇಲಾಖೆ – ಕೌಶಲ್ಯ ಕರ್ನಾಟಕ
- ಸ್ತಬ್ದಚಿತ್ರ ಉಪ ಸಮಿತಿ – ಸಾಮಾಜಿಕ ನ್ಯಾಯ
- ಸ್ತಬ್ದಚಿತ್ರ ಉಪಸಮಿತಿ – ಆನೆ ಬಂಡಿ