ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಸುನ್ನಿಚೌಕ್ ಬಳಿ ನಡೆದಿದೆ.
ಫರ್ವೇಝ್ ಖಾನ್ (17) ಕೊಲೆಯಾದ ಹುಡುಗ. ಆತನನ್ನು 15 ವರ್ಷದ ಬಾಲಕ ಕೊಲೆ ಮಾಡಿದ್ದಾನೆ. ಆಟವಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಫರ್ವೇಝ್ ಖಾನ್ ಗೆ ಬಾಲಕ ಚಾಕುವಿನಿಂದ ಇರಿದಿದ್ದಾನೆ.
ಅಪ್ರಾಪ್ತ ಆರೋಪಿಯನ್ನು ಮಂಡಿ ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.