ಸಮವಸ್ತ್ರ ನಿಯಮ ರದ್ದುಗೊಳಿಸಿ ಹಿಜಾಬಿಗೆ ಅನುಮತಿ ನೀಡಿದ ಮೈಸೂರು ಕಾಲೇಜು

Prasthutha|

ಮೈಸೂರು: ನಗರದ ಐತಿಹಾಸಿಕ ಖಾಸಗಿ ಕಾಲೇಜೊಂದು ಶುಕ್ರವಾರ ತನ್ನ ಸಮವಸ್ತ್ರ ನಿಯಮವನ್ನು ರದ್ದುಗೊಳಿಸಿದ್ದಲ್ಲದೆ ಮುಸ್ಲಿಮ್ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಿದೆ. ಇಂತಹ ನಿರ್ಧಾರ ಕೈಗೊಂಡ ರಾಜ್ಯದ ಮೊದಲ ಕಾಲೇಜು ಇದಾಗಿದೆ.

- Advertisement -

“ನಾಲ್ವರು ವಿದ್ಯಾರ್ಥಿಗಳು ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ನಿರಾಕರಿಸಿದರು ಮತ್ತು ಪ್ರತಿಭಟನೆ ನಡೆಸುತ್ತಿದ್ದರು. ಕೆಲವು ಸಂಸ್ಥೆಗಳು ಅವರಿಗೆ ಬೆಂಬಲವನ್ನು ನೀಡಿವೆ. ಇಂದು ಕಾಲೇಜಿಗೆ ಭೇಟಿ ನೀಡಿ ಎಲ್ಲರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಮಧ್ಯೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವ ತನ್ನ ಸಮವಸ್ತ್ರ ನಿಯಮವನ್ನು ರದ್ದುಗೊಳಿಸುವುದಾಗಿ ಕಾಲೇಜು ಘೋಷಿಸಿತು. ” ಎಂದು ಮೈಸೂರಿನ ಡಿಡಿಪಿಯು ಡಿ ಕೆ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ಹಕ್ಕು ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಕಾಲೇಜಿನಲ್ಲಿ ಗದ್ದಲ ಸೃಷ್ಟಿಯಾಗಿತ್ತು.  ಇದೀಗ ಕಾಲೇಜು ಆಡಳಿತ ಮಂಡಳಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿದೆ.

Join Whatsapp