ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಉನ್ನತ ಹುದ್ದೆಗೆ ಬಡ್ತಿ ಪಡೆದ ಮೈಸೂರು ಮೂಲದ ಗೀತಾ ಗೋಪಿನಾಥ್

Prasthutha|

ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಯ ಎರಡನೇ ಮುಖ್ಯ ಹುದ್ದೆಯಾದ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಗೀತಾ ಗೋಪಿನಾಥ್ 2022ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೈಸೂರು ಮೂಲದವರಾದ ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿದ್ದು, ಅವರಿಗೆ ಐಎಂಎಫ್‌ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ ಎಂದು ಐಎಂಎಫ್ ಘೋಷಿಸಿದೆ. ಈ ಮೂಲಕ ಭಾರತ ಮೂಲದ ಗೀತಾ ಗೋಪಿನಾಥ್ ಐಎಂಎಫ್ ನ ಮತ್ತೊಂದು ಪ್ರಮುಖ ಹುದ್ದೆಗೆ ಏರಿದ್ದಾರೆ.

- Advertisement -

ಐಎಂಎಫ್ ನ ಉಪವ್ಯವಸ್ಥಾಪಕ ನಿರ್ದೇಶಕ ಜೆಫ್ರಿ ಒಕಾಮೊಟೊ ಅವರ ಅಧಿಕಾರಾವಧಿ ಜನವರಿಯಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ, ಆ ಹುದ್ದೆಗೆ ಖ್ಯಾತ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಮೂರು ವರ್ಷ ಐಎಂಎಫ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥ್ ಮುಂದಿನ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗೀತಾ ಗೋಪಿನಾಥ್ ಅವರು ಐಎಂಎಫ್ ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಅವರು ಆ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು. ಜನವರಿಯಲ್ಲಿ ಗೀತಾ ಗೋಪಿನಾಥ್ ಅಧಿಕಾರಾವಧಿ ಮುಕ್ತಾಯವಾಗುತ್ತಿತ್ತು. ಹೀಗಾಗಿ, ಅದಾದ ಬಳಿಕ ಗೀತಾ ಗೋಪಿನಾಥ್ ಜನವರಿಯಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಮರಳುವುದಾಗಿ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಘೋಷಿಸಿದ್ದರು. ಆದರೆ, ಜನವರಿಯಲ್ಲಿ ಅವರು ಮತ್ತೆ ಐಎಂಎಫ್ ಮುಖ್ಯ ಹುದ್ದೆಗೆ ಬಡ್ತಿ ಪಡೆಯುವ ಮೂಲಕ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Join Whatsapp