ಮ್ಯಾನ್ಮಾರ್ : ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ

Prasthutha|

ಯಾಂಗೂನ್: ಸೋಮವಾರ ಮ್ಯಾನ್ಮಾರ್ ನ್ಯಾಯಾಲಯ ಮೂರು ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದಂತೆ ಆಂಗ್ ಸಾನ್ ಸೂಕಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ವಾಕಿ-ಟಾಕಿ ಪ್ರಕರಣದಲ್ಲಿ ಸೂಕಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

- Advertisement -

ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರ ಮತ್ತು ಸರ್ಕಾರಿ ಪ್ರೇರಿತ ಹಿಂಸಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿ 1 ರಂದು ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿದ ಬಳಿಕ ಸೇನೆ ಅವರನ್ನು ಬಂಧಿಸಿತ್ತು.

ಆಂಗ್ ಸಾನ್ ಸೂಕಿ ನೇತೃತ್ವದ ಸರ್ಕಾರ ಪ್ರೇರಿತ ಹಿಂಸಾಚಾರದಿಂದಾಗಿ ಜನರಲ್ ಗಳ ಅಧಿಕಾರವನ್ನು ಕಸಿದುಕೊಳ್ಳಲಾಗಿತ್ತು. ಈ ದಂಗೆಯಲ್ಲಿ 1400 ಕ್ಕೂ ಅಧಿಕ ನಾಗರಿಕರು ಕೊಲ್ಲಲ್ಪಟ್ಟರು ಎಂದು ಸೇನೆ ಆರೋಪಿಸಿತ್ತು.

- Advertisement -

ಪ್ರಸಕ್ತ ವಾಕಿ-ಟಾಕಿಯ ಆಮದು, ಶೇಖರಣೆ ಮತ್ತು ಕೋವಿಡ್ ನಿಯಮಾವಳಿಯ ಉಲ್ಲಂಘಣೆಯ ಆರೋಪದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ಇದಕ್ಕಾಗಿ ಸೂಕಿಯವರಿಗೆ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.



Join Whatsapp