ಮ್ಯಾನ್ಮಾರ್ ನಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ವಿರೋಧಿಸಿ ನಾಗರಿಕರ ಪ್ರತಿಭಟನೆ | ರಬ್ಬರ್ ಬುಲೆಟ್ ಬಳಕೆ; ಪ್ರತಿಭಟನೆಗಳಿಗೆ ನಿರ್ಬಂಧ

Prasthutha|

ಮಂಡಾಲಯ್ : ಮ್ಯಾನ್ಮಾರ್ ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ರಬ್ಬರ್ ಬುಲೆಟ್ ಬಳಸಿದ ಮತ್ತು ಅಶ್ರುವಾಯು ಸಿಡಿಸಿದ ಘಟನೆ ಮಂಗಳವಾರ ನಡೆದಿದೆ.

- Advertisement -

ನಾಗರಿಕ ಸರಕಾರ ಮರುಸ್ಥಾಪಿಸುವಂತೆ ಮತ್ತು ತಮ್ಮ ನಾಯಕಿ ಆಂಗ್ ಸಾನ್ ಸೂ ಕಿ ಮತ್ತು ಅವರ ಆಪ್ತರನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನಕಾರರು ಕಳೆದ ನಾಲ್ಕು ದಿನಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮ್ಯಾನ್ಮಾರ್ ರಾಜಧಾನಿ ನಾಯ್ಪಿಡಾದಲ್ಲಿ ಪ್ರತಿಭಟನಕಾರರ ಮೇಲೆ ರಬ್ಬರ್ ಬುಲೆಟ್ ಬಳಸಲಾಗಿದೆ. ಅವರ ವಿರುದ್ಧ ಜಲ ಫಿರಂಗಿಗಳಲ್ಲೂ ಬಳಸಲಾಗಿದೆ.

- Advertisement -

ಐದು ಜನಕ್ಕಿಂತ ಹೆಚ್ಚು ನೆರೆಯಬಾರದು ಎಂದು ಕ್ರಿಪ್ರ ಕ್ರಾಂತಿಯ ನಾಯಕರು ಸೋಮವಾರ ಆದೇಶಿಸಿದ್ದರೂ, ಪ್ರತಿಭಟನಕಾರರು ಆದೇಶವನ್ನು ಲೆಕ್ಕಿಸದೆ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ದೇಶದ ಎರಡನೇ ಅತಿದೊಡ್ಡ ನಗರ ಯಾಂಗಾನ್ ನಲ್ಲೂ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ, ಸಾವಿರಾರು ಜನರು ಶನಿವಾರದಿಂದ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.  



Join Whatsapp