ನನ್ನ ಮಗ ನಿರಪರಾಧಿ: ಬಂಧಿತ ಯಾಸೀನ್ ತಂದೆ

Prasthutha|

ಶಿವಮೊಗ್ಗ: ನನ್ನ ಮಗನಿಗೆ ಯಾವ ಸಂಘಟನೆಯ ನಂಟೂ ಹೊಂದಿಲ್ಲ. ನಾವು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ನಮ್ಮನ್ನು ಗುರಿಪಡಿಸಲಾಗುತ್ತಿದೆ ಎಂದು ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ ಆರೋಪದಲ್ಲಿ ಬಂಧಿತರಾದ ಯಾಸೀನ್ ತಂದೆ ಹೇಳಿದ್ದಾರೆ.

- Advertisement -


ಮಾಧ್ಯಮಕ್ಕೆ ಪ್ರತಿಕ್ರಿಸಿದ ಅವರು, ಯಾಸೀನ್ ನನ್ನು 15 ದಿನಗಳ ಹಿಂದೆಯೇ ವಶಕ್ಕೆ ಪಡೆದಿದ್ದಾರೆ. ನಿನ್ನೆ ಪೊಲೀಸರು ಕರೆ ಮಾಡಿ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಮಗನೊಂದಿಗೆ ಮಾತನಾಡಲು ಕೂಡ ಅವಕಾಶ ಕಲ್ಪಿಸಿಲ್ಲ. ಆತನ ವ್ಯಕ್ತಿತ್ವದ ಬಗ್ಗೆ ನಮ್ಮ ಊರಿನ ಜನರಲ್ಲಿ ಬೇಕಾದರೆ ಕೇಳಿ ಎಂದು ತಿಳಿಸಿದ್ದಾರೆ.


ತೀರ್ಥಹಳ್ಳಿ ಸೊಪ್ಪುಗುಡ್ಡೆ ಶಾರೀಕ್ ಮತ್ತು ಆತನ ಸಹಚರರಾದ ಮಂಗಳೂರು ಮಾಜ್ ಮುನೀರ್ ಅಹಮ್ಮದ್ (22) ಹಾಗೂ ಶಿವಮೊಗ್ಗ ಸಿದ್ದೇಶ್ವರ ನಗರ ಸಯ್ಯದ್ ಯಾಸೀನ್ (21) ಎಂಬವರನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ ಆರೋಪದಲ್ಲಿ ಯುಎಪಿಎಯಡಿ ಬಂಧಿಸಲಾಗಿದೆ.



Join Whatsapp