ನಾಳೆ ನನ್ನ ಪತಿ ಕೋರ್ಟ್ ನಲ್ಲಿ “ದೊಡ್ಡ ಸತ್ಯ ಬಹಿರಂಗಪಡಿಸುತ್ತಾರೆ”: ಸುನಿತಾ ಕೇಜ್ರಿವಾಲ್

Prasthutha|

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸಿದ ಹಲವು ದಾಳಿಗಳಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ. ನನ್ನ ಪತಿ ಮಾರ್ಚ್ 28 ರಂದು ನ್ಯಾಯಾಲಯದಲ್ಲಿ “ದೊಡ್ಡ ಸತ್ಯ ಬಹಿರಂಗಪಡಿಸುತ್ತಾರೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಹೇಳಿದ್ದಾರೆ.

- Advertisement -


ಅರವಿಂದ್ ಕೇಜ್ರಿವಾಲ್ ಅವರು ನಾಳೆ ಕೋರ್ಟ್ ಸತ್ಯವನ್ನು ಬಹಿರಂಗಪಡಿಸುತ್ತಾರೆ ಮತ್ತು ಅದಕ್ಕೆ ಸಾಕ್ಷ್ಯವನ್ನು ಸಹ ನೀಡುತ್ತಾರೆ ಎಂದು ಸುನಿತಾ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರನ್ನು ಮಾರ್ಚ್ 21 ರಂದು ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಬಂಧಿಸಿತು ಮತ್ತು ನಂತರ ಮಾರ್ಚ್ 28 ರವರೆಗೆ ಅವರನ್ನು ಇಡಿ ಕಸ್ಟಡಿಗೆ ನೀಡಲಾಯಿತು.



Join Whatsapp