►ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ
ಬೆಳ್ಳಾರೆ: ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೂ ನನ್ನ ಪತಿಗೂ ಯಾವುದೇ ಸಂಬಂಧವಿಲ್ಲ. ವಿಚಾರಣೆಗೆಂದು ಕರೆದು ಕೊಂಡು ಹೋಗಿದ್ದ ಪೊಲೀಸರು ಬಂಧನ ಮಾಡಿದ್ದಾರೆ ಎಂದು ಶಫೀಕ್ ಪತ್ನಿ ಹನ್ಶೀಫ ಹೇಳಿದ್ದಾರೆ.
ನನ್ನ ಪತಿ ಅಮಾಯಕ. ಮೃದು ಮನಸ್ಸಿನ ಅವರು ಯಾವುದೇ ಅಹಿತಕರ ಘಟನೆಗಳಲ್ಲಿಯೂ ತೊಡಗಿಸಿಕೊಂಡವರಲ್ಲ. ಅವರನ್ನು ಇಲ್ಲದ ಕೇಸ್ ನಲ್ಲಿ ಸಿಲುಕಿಸಲು ಯತ್ನಿಸಲಾಗಿದೆ. ನಿಜವಾದ ಆರೋಪಿಗಳನ್ನು ಬಂಧಿಸಿ ಶಫೀಕ್ ನನ್ನು ಬಿಟ್ಟು ಬಿಡಬೇಕು. ಅವರು ಘಟನೆ ನಡೆದ ದಿನ ಅಜ್ಜಿ ಮನೆಯಲ್ಲಿ ಕಾರ್ಯಕ್ರಮ ಇತ್ತು. ಅಲ್ಲಿದ್ದರು, ಆತ ಅಪರಾಧಿಯಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಶಫೀಕ್ ರನ್ನು ಪ್ರವೀಣ್ ಹತ್ಯೆಯಾದ ರಾತ್ರಿಯೇ ಪೊಲೀಸರು ಮನೆಗೆ ಬಂದು ವಿಚಾರಣೆಗೆಂದು ಠಾಣೆಗೆ ಕರೆಸಿಕೊಂಡಿದ್ದರು. ಇದನ್ನು ಶಫೀಕ್ ಪತ್ನಿ ಮತ್ತು ತಂದೆ ಕೂಡ ದೃಢಪಡಿಸಿದ್ದಾರೆ. ಆದರೆ ಕೆಲ ಮಾಧ್ಯಮಗಳಲ್ಲಿ ಬಂಧಿತರನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಬಿತ್ತರಿಸುತ್ತಿದೆ. ಇದು ಪೊಲೀಸರ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ.